Big 3: 30 ವರ್ಷಗಳ ಸಮಸ್ಯೆಗೆ ಮುಕ್ತಿ ಕೊಡಿಸಿದ ಬಿಗ್ 3: ಶಾಲಾ ಜಾಗ ಅತಿಕ್ರಮಣ ತೆರವು
ಕಳೆದ 30ವರ್ಷಗಳಿಂದ ಸರ್ಕಾರಿ ಶಾಲೆಯ ಜಾಗ ಅತಿಕ್ರಮಣ ಮಾಡಿದವರನ್ನ ಎತ್ತಂಗಡಿ ಮಾಡಲು ಇಡೀ ಗ್ರಾಮವೇ ಹೋರಾಟ ನಡೆಸಿತ್ತು. ಆದರೆ ಆಗಿರಲಿಲ್ಲ. ಸುವರ್ಣ ನ್ಯೂಸ್ ಬಿಗ್-3ಯಲ್ಲಿ ವರದಿ ಪ್ರಸಾರ ಮಾಡಿ, ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಿತ್ತು.
ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಉಜ್ಜಪ್ಪವಡೇಯರಹಳ್ಳಿಯಲ್ಲಿ ಸರ್ಕಾರಿ ಶಾಲೆಯ ಜಾಗವನ್ನು ಕೆಲವರು ಅತಿಕ್ರಮಣ ಮಾಡಿಕೊಂಡಿದ್ರು. 106 ಮಕ್ಕಳು ಓದುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುತ್ತಮುತ್ತ ಒತ್ತುವರಿದಾರರ ಕಾಟ ದಿನೇ ದಿನೇ ಹೆಚ್ಚಾಗ್ತಾನೆ ಇತ್ತು. ಇನ್ನು ಒತ್ತುವರಿ ಜಾಗದಲ್ಲಿ ಕೆಲವರು ಬೇಲಿ ಹಾಕಿದ್ದರೆ, ಇನ್ನು ಕೆಲವರು ಮನೆಗಳನ್ನ ಕಟ್ಟಿದ್ದರು. 4.8 ಎಕರೆ ಜಮೀನಿನಲ್ಲಿ ಒಟ್ಟು 14 ಜನ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದರು. ಈ ಬಗ್ಗೆ ಗ್ರಾಮಸ್ಥರೆಲ್ಲಾ ಬೇಸತ್ತು ಸ್ಕೂಲ್ ಉಳಿಸಿ ಎಂದು ತಹಶೀಲ್ದಾರ್ ಹಾಗೂ ಇಒಗೆ ಮನವಿ ಮಾಡಿದ್ದರೂ ಸಮಸ್ಯೆ ಮಾತ್ರ ಕ್ಲಿಯರ್ ಆಗಿರಲಿಲ್ಲ. ಇದೀಗ ಸುವರ್ಣ ನ್ಯೂಸ್ ಬಿಗ್-3ಯಿಂದ ಕಳೆದ 30 ವರ್ಷಗಳಿಂದ ಬಗೆಹರಿಯದ ಸಮಸ್ಯೆ ಕೇವಲ 20 ದಿನದಲ್ಲಿ ಬಗೆಹರಿದಿದೆ.