BIG 3: ರೈತರ ಜೊತೆ ಅಧಿಕಾರಿಗಳ ಚೆಲ್ಲಾಟ : ತಲೆ ಮೇಲೆ ಕೈ ಹೊತ್ತು ಕೂತ ರೈತರು

ದಾವಣಗೆರೆ ತಾಲೂಕಿನ  ಮಂಡಲೂರು ಗ್ರಾಮ ಬರಪೀಡಿತ ಗ್ರಾಮವಾಗಿದೆ. ಕೊಳವೆ ಬಾವಿ ನೀರಿನ ಮೂಲಕ ಬದುಕು ಕಟ್ಟಿಕೊಂಡಿರುವ ರೈತರು ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಹೈರಾಣಾಗಿದ್ದಾರೆ

First Published Mar 10, 2023, 12:37 PM IST | Last Updated Mar 10, 2023, 12:42 PM IST

ದಾವಣಗೆರೆ ತಾಲೂಕಿನ  ಮಂಡಲೂರು ಗ್ರಾಮ ಬರಪೀಡಿತ ಗ್ರಾಮವಾಗಿದೆ. ಕೊಳವೆ ಬಾವಿ ನೀರಿನ ಮೂಲಕ ಬದುಕು ಕಟ್ಟಿಕೊಂಡಿರುವ ರೈತರು ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಹೈರಾಣಾಗಿದ್ದಾರೆ, ಮಂಡಲೂರು ಗ್ರಾಮ ಬರಪೀಡಿತ ಗ್ರಾಮವಾಗಿದ್ದರಿಂದ ಇಲ್ಲಿನ ರೈತರು ಕೊಳವೆ ಬಾವಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಇನ್ನು ಕಳೆದ  ವರ್ಷ ಚೆನ್ನಾಗಿ ಮಳೆ ಬಿದ್ದಿರುವುದ್ದರಿಂದ ಈ ಭಾಗದ ನೂರಾರು ಬೋರ್ ವೆಲ್ ಗಳಲ್ಲಿ ಭರಪೂರವಾದ ನೀರು ದೊರೆಯುತ್ತಿದೆ. ಆದ್ರೆ ಬೋರ್ ವೆಲ್ ನೀರನ್ನು ಬೆಳೆಗಳಿಗೆ ಹಾಯಿಸಲು ಆಗುತ್ತಿಲ್ಲ.ಹೊಲದಲ್ಲಿ ದುಡಿಯುವ ರೈತರಿಗೆ ಸಕಾಲದಲ್ಲಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಡ್ರೈ ಲ್ಯಾಂಡ್‌ನಲ್ಲಿ ಬೆಳೆಗಳಿಗೆ ಭರಪೂರವಾಗಿ ನೀರು ಹಾಯಿಸುಲು ಮೋಟರ್ ಜೊತೆಗೆ ವಿದ್ಯುತ್ ಕೂಡ ರೈತರಿಗೆ ಅತ್ಯವಶ್ಯಕವಾಗಿರುತ್ತದೆ...ದಾವಣಗೆರೆ ತಾಲೂಕಿನ ಮಂಡಲೂರು ಗ್ರಾಮದಲ್ಲಿ ವಿದ್ಯುತ್ ವೋಲ್ಟೆಜ್  ಡ್ರಾಪ್ ಆಗ್ತಿದ್ದು, ಸಿಂಗಲ್ ಫೇಸ್‌ ನಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದೆ. ಇದರಿಂದ, ಜಮೀನಿನಲ್ಲಿರುವ  ನೂರಾರು ಮೋಟರ್ ಗಳು ಸುಟ್ಟು ಹೋಗಿವೆ, ಇನ್ನು ಸಿಂಗಲ್ ಪೇಸ್ ವಿದ್ಯುತ್ ಲೈನ್‌ನಿಂದ  ವಿದ್ಯುತ್ ಟಿಸಿಗಳು ಕೂಡ ಸುಟ್ಟು ಕರಕಲಾಗಿದ್ದು,  ಜಮೀನಿಗೆ  ನೀರು ಹಾಯಿಸಲಾಗದೆ ಬೆಳೆಗಳು ಒಣಹೋಗುತ್ತಿರುವುದ್ದರಿಂದ ರೈತರ ಬದುಕು ಅತಂತ್ರವಾಗಿದೆ....

Video Top Stories