BIG 3: ನಿರ್ಮಾಣ ಮಾಡಿ ಐದು ತಿಂಗಳಲ್ಲೇ ಬಿರುಕು ಬಿಟ್ಟ ಸೇತುವೆ: ಹಳ್ಳಿ ಜನರ ಗೋಳು ಕೇಳುವವರು ಯಾರು?
ಧಾರವಾಡ ತಾಲೂಕಿನ ಮುರಕಟ್ಟಿ ಗ್ರಾಮದ ದೇವರ ಹುಬ್ಬಳ್ಳಿಯಲ್ಲಿ ಸೇತುವೆ ಕಾಮಗಾರಿ ಮಾಡಿ ಐದು ತಿಂಗಳಾಗಿಲ್ಲ, ಆಗಲೇ ಸೇತುವೆ ಕುಸಿದು ಬಿರುಕು ಬಿಟ್ಟಿದೆ.
2015ರಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿಯಲ್ಲಿ 9 ಕಿ.ಮಿ ರಸ್ತೆ ಮತ್ತು ಸೇತುವೆಗೆ ಅಂತ ದುಪರ್ತಿವಾಡೆದಿಂದ ದಣೆವರ ಹುಬ್ಬಳ್ಳಿ ಗ್ರಾಮದವರೆಗೆ 6 ಕೋಟಿ 22 ಲಕ್ಷ ರೂ. ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದರೆ 2016ರಲ್ಲಿ ಕಾಮಗಾರಿ ಮುಕ್ತಾಯವಾಗಿದ್ದು, ಆದರೆ ಅಲ್ಲಿಂದ ಇಲ್ಲಿಯವರೆಗೆ ರಸ್ತೆ ಕಾಮಗಾರಿ ನಿರ್ವಹಣೆ ಮತ್ತು ಮೆಂಟೆನೆನ್ಸ್'ಗೆ 5 ವರ್ಷದವರೆಗೆ ಮಾಡಬೇಕಾಗಿತ್ತು. ಆದರೆ ಸಧ್ಯ ಇಡೀ ಸೇತುವೆ ಸಂಪೂರ್ಣ ಕಳಪೆ ಮಟ್ಟದ್ದಾಗಿದ್ದು, ಗ್ರಾಮಸ್ಥರು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಹಿಡಿ ಶಾಪವನ್ನು ಹಾಕುತ್ತಿದ್ದಾರೆ. ಕಲಘಟಗಿ ಶಾಸಕ ನಿಂಬಣ್ಣವರ ಅವರಿಗೆ ಎಷ್ಟೋ ಭಾರಿ ಮರು ನಿರ್ಮಾಣಕ್ಕೆ ಕೇಳಿಕೊಂಡರೂ ಅವರು ಕೂಡಾ ಕ‌್ಯಾರೆ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ಸಂಬಂಧಪಟ್ಟವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಎಲ್ಲದಕ್ಕೂ ಹೆಚ್ಚಾಗಿ ಶಾಲಾ ಮಕ್ಕಳು ಮುರಕಟ್ಟಿ ಗ್ರಾಮದಲ್ಲಿ ನಿಗದಿ ಮಾರ್ಗವಾಗಿ ಪ್ರತಿನಿತ್ಯ 10 ಕಿ.ಮೀ ಸಂಚರಿಸುತ್ತಿದ್ದಾರೆ. ಇದರಿಂದ ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗೆ ಬರುತ್ತಿಲ್ಲ ಮತ್ತು ಸರಿಯಾದ ಸಮಯಕ್ಕೆ ಮನೆಗೆ ಬರುತ್ತಿಲ್ಲ. ಇದರಿಂದ ಕೇವಲ ಎರಡುವರೆ ಕಿ.ಮೀ ಕ್ರಮಿಸಬೇಕಿದ್ದ ರಸ್ತೆ ಸದ್ಯ ಪ್ರತಿನಿತ್ಯ 10 ಕಿ ಮೀ ಸಂಚರಿಸುವ ಸ್ಥಿತಿ ಬಂದೋದಗಿದೆ.