Asianet Suvarna News Asianet Suvarna News

4 ಸಿಎಂಗಳನ್ನು ಕೊಟ್ಟ ಜಿಲ್ಲೆಯ ಹಳ್ಳಿಗಿಲ್ಲ ರಸ್ತೆ! ಛೇ... ಇದೆಂಥಾ ದುರಾವಸ್ಥೆ

4 ಸಿಎಂಗಳನ್ನು ಕೊಟ್ಟ ಜಿಲ್ಲೆಯ ಹಳ್ಳಿಯೊಂದಕ್ಕೆ 4 ಕಿ.ಮೀ ರಸ್ತೆ ರಿಪೇರಿ ಮಾಡಿಸುವ ಯೋಗ್ಯತೆ ಇಲ್ಲಿನ ಆಡಳಿತವರ್ಗಕ್ಕೆ ಇಲ್ಲವಾಯಿತೇ? ಮಲೆನಾಡಿನ ಊರಜನರ ಗೋಳು ಕೇಳುವವರಾರು?

ಶಿವಮೊಗ್ಗ (ಜೂ. 20): ಒಂದಲ್ಲ, ಎರಡಲ್ಲ, ರಾಜ್ಯಕ್ಕೆ ನಾಲ್ಕು ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆ ಶಿವಮೊಗ್ಗ. ಇಲ್ಲಿನ ಹೊಸನಗರ ತಾಲೂಕಿನಲ್ಲಿ, ನೂರಾರು ಕುಟುಂಬಗಳು ವಾಸಿಸುವ ಕರಿಮನೆ ಎಂಬ ಹಳ್ಳಿಯಿದೆ. ಆ ಹಳ್ಳಿಗೆ ಸಂಪರ್ಕ ಕಲ್ಪಿಸುವ ‘ರಸ್ತೆ’ ಎಂದು ಕರೆಯಲ್ಪಡುವ ಒಂದು  ಕೆಸರುಗದ್ದೆಯಂತಹ, ಗುಂಡಿಯಿಂದ ತುಂಬಿರುವ ಜಾಗ ಇದೆ!  

ಸರ್ಕಾರಿ ಬಸ್ಸುಗಳಂತೂ ಈ ಊರಿಗೆ ಓಡಾಡಲ್ಲ. ಜನ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಇರಲಿ ಬಿಡಿ, ಖಾಸಗಿ ಬಸ್ಸುಗಳಾದ್ರೂ ಓಡಿಸಿ ಎಂದು ಮಾಲೀಕರಿಗೆ ಮನವಿ ಮಾಡಿದ್ರೆ, ನಿಮ್ಮೂರಿಗೆ ರಸ್ತೆ ಎಲ್ಲಿದೇರೀ? ಎಂಬ ಉತ್ತರ ಬೇರೆ. ಬಸ್ಸಿನ ಸಂಪರ್ಕವಿರದ ಕಾರಣ ಶಾಲಾ ಕಾಲೇಜು ಮಕ್ಕಳು, ಗ್ರಾಮಸ್ಥರು ಪ್ರತಿಯೊಂದು ಕೆಲಸಕ್ಕೂ 8 ಕಿಮೀ ನಡೆದೇ ಹೋಗಬೇಕಾದ ಅನಿವಾರ್ಯತೆ! ಈ ಭಾಗದಲ್ಲಿ ಗಾಳಿಮಳೆ ತುಸು ಹೆಚ್ಚೇ ಬರುವ ಕಾರಣ ಶಾಲಾ ಕಾಲೇಜು ಮಕ್ಕಳು ಓಡಾಡಕ್ಕೆ ಸಾಹಸ ಪಡಬೇಕು. ಅಲ್ಲದೆ ಕಾಡು ಮಾರ್ಗ ಆದ ಕಾರಣ ಭಯವೂ ಒಮ್ಮೊಮ್ಮೆ ಆವರಿಸುತ್ತದೆ. BIG 3 ಈ ಸ್ಟೋರಿ ನೋಡಿದ್ರೆ ನಿಮಗೆ ಗೊತ್ತಾಗುತ್ತೆ ಜನರ ಗೋಳು.   

ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಅದನ್ನು ರಿಪೇರಿ ಮಾಡುವ ಯಾವುದೇ ಲಕ್ಷಣ ದೂರದೂರದವರೆಗೆ ಕಾಣದೆ, ಕೊನೆಗೆ ಊರ ಜನರೇ ಸೇರಿ ಸುಮಾರು 4 ಕಿ.ಮೀ. ರಸ್ತೆಯನ್ನು ರಿಪೇರಿ ಮಾಡಿದ್ದಾರೆ. 4 ಸಿಎಂಗಳನ್ನು ಕೊಟ್ಟ ಜಿಲ್ಲೆಯ ಹಳ್ಳಿಯೊಂದಕ್ಕೆ 4 ಕಿ.ಮೀ ರಸ್ತೆ ರಿಪೇರಿ ಮಾಡಿಸುವ ಯೋಗ್ಯತೆ ಇಲ್ಲಿನ ಆಡಳಿತವರ್ಗಕ್ಕೆ ಇಲ್ಲವಾಯಿತೇ? ಎಂದು ಜನ ಈಗ ಕೇಳ್ತಾ ಇರುವ ಪ್ರಶ್ನೆಯಾಗಿದೆ.
 

Video Top Stories