Asianet Suvarna News Asianet Suvarna News

ಬೀದರ್‌: ಶೀಘ್ರದಲ್ಲೇ ಉಗ್ರ ನರಸಿಂಹನ ದರ್ಶನ

Sep 15, 2021, 1:23 PM IST

ಬೀದರ್‌(ಸೆ.15):  ದೇಶದಲ್ಲೇ ಅತ್ಯಂತ ವೈಶಿಷ್ಟ್ಯತೆ, ವಿಶೇಷತೆ ಹೊಂದಿರುವ ಐತಿಹಾಸಿಕ ಪುರಾಣ ಪ್ರಸಿದ್ಧ ಝರಣಿ ನರಸಿಂಹ ಸ್ವಾಮಿ ಗುಹಾಂತರ ದೇವಾಲಯದ ಗರ್ಭ ಗುಡಿಯ ದರ್ಶನ ಭಾಗ್ಯ ಸಮೀಸುತ್ತಿದೆ. ಹೌದು, ಸತತ 2 ವರ್ಷ ಬರಗಾಲದಿಂದ ಗುಹೆಯಲ್ಲಿ ನೀರಿನ ಕೊರತೆ, ಗುಹೆಯಲ್ಲಿ ಆಕ್ಸಿಜನ್ ಪೂರೈಕೆ ಸಮಸ್ಯೆ, ಕೋವಿಡ್-19 ಭೀತಿಯಿಂದ ಕಳೆದ ಐದು ವರ್ಷಗಳಿಂದ ನರಸಿಂಹನ ಗರ್ಭ ಗುಡಿಯಲ್ಲಿರುವ ವಿಶೇಷ ಮೂರ್ತಿಯ ದರ್ಶನ ಸಿಗದೇ ಭಕ್ತಾಧಿಗಳು ನಿರಾಸೆರಾಗುತ್ತಿದ್ದರು. ಈಗ ಹಟ್ಟಿ ಚಿನ್ನದ ಗಣಿಯ ಕಂಪನಿ, ಜಿಲ್ಲಾಡಳಿತದ ಪ್ರಯತ್ನದಿಂದ ನರಸಿಂಹನ ದರ್ಶನ ಸಿಗುವ ಕಾಲ ಕೂಡಿ ಬರುತ್ತಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಘೋಷಣೆಗೆ ಮಾತ್ರ ಸೀಮಿತವಾಯ್ತಾ?: ಖಾಸಗಿ ಶಾಲಾ ಶಿಕ್ಷಕ, ಸಿಬ್ಬಂದಿಗೆ ಸಿಗದ ನೆರವು..!