Bidar: ಮೈದುಂಬಿ ಹರಿಯುತ್ತಿದೆ ಕುಸರಂಪಳ್ಳಿ ಜಲಪಾತ, ವೀಕೆಂಡ್‌ಗೆ ಬೆಸ್ಟ್‌ ಸ್ಪಾಟ್‌!

ಬೀದರ್‌ನಿಂದ ಕೇವಲ 35 ಕಿಲೋ ಮೀಟರ್ ಅಂತರದಲ್ಲಿ, ಬೀದರ್ ತಾಲೂಕಿನ ಕರಕನಹಳ್ಳಿ ಗ್ರಾಮದಿಂದ 5 ಕೀ.ಲೋ ಮೀಟರ್ ದೂರದಲ್ಲಿ, ಬೀದರ್ ಹಾಗೂ ಕಲಬುರಗಿ ಜಿಲ್ಲೆಯ ಚಿಂಚೊಳ್ಳಿಯ ಗಡೀ ಭಾಗದಲ್ಲಿರುವ  ಕುಸರಂಪಳ್ಳಿ ಜಲಪಾತ ಜನರನ್ನ ತನ್ನತ್ತ ಸೆಳೆಯುತ್ತಿದೆ. 
 

First Published Nov 17, 2021, 1:41 PM IST | Last Updated Nov 17, 2021, 1:51 PM IST

ಬೀದರ್‌ (ನ. 17): ನಗರದಿಂದ ಕೇವಲ 35 ಕಿಲೋ ಮೀಟರ್ ಅಂತರದಲ್ಲಿ, ಬೀದರ್ ತಾಲೂಕಿನ ಕರಕನಹಳ್ಳಿ ಗ್ರಾಮದಿಂದ 5 ಕೀ.ಲೋ ಮೀಟರ್ ದೂರದಲ್ಲಿ, ಬೀದರ್ ಹಾಗೂ ಕಲಬುರಗಿ (Kalaburgi) ಜಿಲ್ಲೆಯ ಚಿಂಚೊಳ್ಳಿಯ ಗಡೀ ಭಾಗದಲ್ಲಿರುವ  ಕುಸರಂಪಳ್ಳಿ ಜಲಪಾತ ಜನರನ್ನ ತನ್ನತ್ತ ಸೆಳೆಯುತ್ತಿದೆ. 

ಇಲ್ಲಿನ ಜಲವೈಭೋಗವನ್ನ ನೋಡಲು ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರದಿಂದ ನೂರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ. ಕಳೆದ 5 ವರ್ಷದಿಂದ ಮಳೆಯ ಅಭಾವದಿಂದ ಈ ಜಲಪಾತದಲ್ಲಿ ನೀರಿಲ್ಲದೇ ಕಾರಣ ಜನರು ಇಲ್ಲಿಗೆ ಬರುವುದನ್ನ ನಿಲ್ಲಿಸಿದ್ದರು. ಆದರೆ ಈ ವರ್ಷ ಸುರಿದ ಭಾರೀ ಮಳೆಯಿಂದ ಜಪಪಾತ ಮೈದುಂಬಿಕೊಂಡು ಹರಿಯತ್ತಿದ್ದ ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದೆ. ನಾವು ಫ್ರೆಂಡ್ಸ್ ಎಲ್ಲ ಮೊದಲು ಹೈದ್ರಾಬಾದ್ ಸೇರಿದಂತೆ ಬೇರೆಡೆಗೆ ಹೋಗಿ ದುಡ್ಡು ಖರ್ಚು ಮಾಡ್ಬೇಕಾಗಿತ್ತು, ಆದರೆ ಇಲ್ಲಿ‌ ಕಡಿಮೆ ಖರ್ಚಿನಲ್ಲಿ ಫ್ಯಾಮಿಲಿ ಫ್ರೆಂಡ್ಸ್ ಎಲ್ಲ ಬಂದು ಎಂಜಾಯ್ ಮಾಡಬಹುದು ಅಂತಿದ್ದಾರೆ ಪ್ರವಾಸಿಗರು.

Video Top Stories