Asianet Suvarna News Asianet Suvarna News

Bidar: ನಾಗರಾಜನ ಪವಾಡ! ಮರದ ಮೇಲಿರುವ ಹಾವು ನೋಡಲು ಜನಸಾಗರ

ನಾಗರಾಜ (Cobra) ಹಠಕ್ಕೆ ಆ ಗಡಿ ಗ್ರಾಮಸ್ಥರು ಶರಣಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಗ್ರಾಮದ ಲಕ್ಷ್ಮೀ ದೇವಸ್ಥಾನದಲ್ಲಿ (Lakshmi Temple) ಸರ್ಪವೊಂದು ಠಿಕಾಣಿ ಹೂಡಿದ್ದು, ದೇವಸ್ಥಾನದ ಹೊರಗಡೆ ಇರುವ ಬೇವಿನ ಮರದಲ್ಲಿ ಹತ್ತಿ ಕೂತಿದೆ.  ಜನ ಹಾವಿನ ಪೂಜೆಗೆ ಮುಗಿಬಿದ್ದು, ಭಜನೆ ಕೀರ್ತನೆ, ಮೆರವಣಿಗೆ ಮಾಡುತ್ತಿದ್ದಾರೆ. 
 

ಬೀದರ್ (ಜ. 15): ನಾಗರಾಜ (Cobra) ಹಠಕ್ಕೆ ಆ ಗಡಿ ಗ್ರಾಮಸ್ಥರು ಶರಣಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಗ್ರಾಮದ ಲಕ್ಷ್ಮೀ ದೇವಸ್ಥಾನದಲ್ಲಿ (Lakshmi Temple) ಸರ್ಪವೊಂದು ಠಿಕಾಣಿ ಹೂಡಿದ್ದು, ದೇವಸ್ಥಾನದ ಹೊರಗಡೆ ಇರುವ ಬೇವಿನ ಮರದಲ್ಲಿ ಹತ್ತಿ ಕೂತಿದೆ.  ಜನ ಹಾವಿನ ಪೂಜೆಗೆ ಮುಗಿಬಿದ್ದು, ಭಜನೆ ಕೀರ್ತನೆ, ಮೆರವಣಿಗೆ ಮಾಡುತ್ತಿದ್ದಾರೆ. 

ಬೀದರಿನ ಭಾಲ್ಕಿ ತಾಲೂಕಿನ ಹಲಸಿತೂಗಾಂವ ಗ್ರಾಮದ ಲಕ್ಷ್ಮಿ ದೇವಸ್ಥಾನದಲ್ಲಿ (Lakshmi Temple) ಕಳೆದ ನಾಲ್ಕು ದಿನಗಳಿಂದ ನಾಗರ ಹಾವೊಂದು ಠಿಕಾಣಿ ಹೂಡಿದೆ. ಮೊದಲನೇ ದಿನ ದೇವಸ್ಥಾನದ ಒಳಗಡೆ ಕಾಣಿಸಿಕೊಂಡು ನಾಗರ ಹಾವು ಎರಡೂ ದಿನಗಳಿಂದ ದೇವಸ್ಥಾನದ ಹೊರಗಡೆ ಇರುವ ಬೇವಿನ ಮರದಲ್ಲೆ  ಠಿಕಾಣಿ ಹೂಡಿದೆ. ದೇವಸ್ಥಾನದಲ್ಲಿರುವ ನಾಗರಾಜನನ್ನು ನೋಡುವದಕ್ಕೆ ಭಕ್ತರ ಸಾಗರವೇ ಹರಿದು ಬರುತ್ತಿದೆ. ಬಾಜಾ ಭಜ್ರಂತಿ, ತಲೆಯ ಮೇಲೆ ಕುಂಭವನ್ನು ಹೊತ್ತಿಕೊಂಡು ತಾಯಂದಿರು ದೇವಸ್ಥಾನದವರೆಗೆ ಮೆರವಣಿಗೆ ಮೂಲಕ ಆಗಮಿಸಿ ನಾಗರಾಜನ ಪೂಜೆ ಪುನಸ್ಕಾರ ಭರ್ಜನೆ ಕಿರ್ತನೆ  ಮಾಡುತ್ತಿದ್ದಾರೆ. 

Makara Sankranti: ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ ಹಂಚೋದ್ಯಾಕೆ.? ಹಬ್ಬದ ಮಹತ್ವವೇನು.?

ಕೆಲ ಯುವಕರು  ಹಾವನ್ನು ಹಿಡಿಯಲು ಮುಂದಾದರೂ  ಹಾವೂ ಮಾತ್ರ ಹೆಡೆ ತೆಗೆಯುವ ಮೂಲಕ ಪ್ರತಿ ದಾಳಿ ನಡೆಸುವ ದೃಶ್ಯಗಳು ಕಂಡು ಬಂದವು. ಇನ್ನೂ ಭಾರಿ ಜನರ ಗದ್ದಲ ಮಧ್ಯೆಯೂ ಹಾವು ಮಾತ್ರ ಮರದಿಂದ  ಕೆಳಗಡೆ  ಇಳಿಯದೇ ಹಾಯಾಗಿ ಮರದಲ್ಲೆ ಠಿಕಾಣಿ ಹೂಡಿದೆ. ಇದು ಸಾಮಾನ್ಯವಾದ  ಹಾವಲ್ಲ ತಾಯಿ ಲಕ್ಷ್ಮಿ ಹಾವಿನ ರೂಪದಲ್ಲಿ ನಮ್ಮೂರಿಗೆ ಬಂದಿದ್ದಾಳೆ ಎನ್ನುತ್ತಿದ್ದಾರೆ ಗ್ರಾಮಸ್ಥರು.

ಗ್ರಾಮದ ಲಕ್ಷ್ಮಿ ದೇವಸ್ಥಾನದಲ್ಲಿ ಮೂರು ದಿನಗಳಿಂದ ಹಾವು ಇಲ್ಲೆ ಠಿಕಾಣಿ ಹೂಡಿದೆ, ಈ ಸರ್ಪವನ್ನು ನೋಡುವದಕ್ಕೆ ಹಲಸಿತೂಗಾಂವ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಕೂಡ ಇಲ್ಲಿಗೆ ಆಗಮಿಸುವ  ಮೂಲಕ ಹಾವಿಗೆ ಪೂಜೆ  ಮಾಡುತ್ತಿದ್ದಾರೆ ಜತೆಗೆ ದರ್ಶನ ಪಡೆದು ಪುನಿತರಾಗುತ್ತಿದ್ದಾರೆ.

 ಈ ಗ್ರಾಮಸ್ಥರು ಮಾತ್ರ  ನಮ್ಮೂರಿಗೆ ಸಾಕ್ಷತ ಲಕ್ಷ್ಮಿಯೇ ಹಾವಿನ ರೂಪದಲ್ಲಿ ಬಂದಿದ್ದು ನಮ್ಮ ಸೌಭಾಗ್ಯ ಎಂದು ಹೇಳುತ್ತಿದ್ದಾರೆ ಇತ್ತ ಇಡೀ ಊರಿನಲ್ಲಿ ಹಬ್ಬದ ವಾತವರಣ ನಿರ್ಮಾಣಗೊಂಡಿದಂತ್ತು ಸುಳ್ಳಲ್ಲ.

Video Top Stories