Asianet Suvarna News Asianet Suvarna News

IISc ಗಾರ್ಡ್ ಸಾವಿಗೆ ಆಡಳಿತ ಮಂಡಳಿ ಕಾರಣ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Jul 3, 2019, 7:20 PM IST

ಬೆಂಗಳೂರು (ಜು.03): ಕಳೆದ ಭಾನುವಾರ ನಗರದ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ (IISc) ಮುಖ್ಯ ದ್ವಾರದ 500 kg ಭಾರದ ಗೇಟ್‌ ಬಿದ್ದು ಭದ್ರತಾ ಸಿಬ್ಬಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಗಾರ್ಡ್ ಸಾವಿಗೆ ಸಂಸ್ಥೆಯೇ ಕಾರಣ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದು, ಮೃತನ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.

ಒಡಿಶಾ ಮೂಲದ ಗೌತಮ್‌ ಬಿಸ್ವಾಲ್‌(24) ಮೃತ ಭದ್ರತಾ ಸಿಬ್ಬಂದಿ. ಕರ್ತ್ಯವ್ಯದ ಸಂದರ್ಭದಲ್ಲಿ, ಕಾರಿಗಾಗಿ ಗೇಟ್ ತೆರೆಯುವಾಗ, ಸುಮಾರು 500 kgಯ ಭಾರದ ಆ ಗೇಟ್‌ ಅವರ ಮೇಲೆ ಬಿದ್ದಿತ್ತು. ಗೇಟ್ ಹಣೆಯ ಮೇಲೆ ಬಲವಾಗಿ ಬಿದ್ದುದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.