Asianet Suvarna News Asianet Suvarna News

Bengaluru ಕಾರ್ತಿಕ ಮಾಸದ ನಿಮಿತ್ತ ಅಕ್ಷಯ ನಗರದ ಕೆರೆಯಲ್ಲಿ ಗಂಗಾ ಆರತಿ

 ಕಾರ್ತಿಕ ಮಾಸದಲ್ಲಿ ನಿಮಿತ್ತ ಅಕ್ಷಯ ನಗರದ ಕೆರೆಯಲ್ಲಿ ಗಂಗಾ ಆರತಿ ಕಾರ್ಯಕ್ರಮವನ್ನು ಶ್ರದ್ಧಾಪೂರ್ವಕವಾಗಿ ನೆರವೇರಿಸಲಾಯಿತು. ಸ್ಥಳೀಯ ಜನರ ಸಹಕಾರದಿಂದ ಪುನರುಜ್ಜೀವನಗೊಂಡಿರುವ ಐದೂವರೆ ಎಕರೆ ವಿಸ್ತಿರ್ಣದ ಈ ಕೆರೆಯಲ್ಲಿ ಸತತ ಐದು ವರ್ಷಗಳಿಂದ ಗಂಗಾ ಆರತಿ ಕಾರ್ಯಕ್ರಮ ನಡೆಯುತ್ತಿದೆ. ಬೇಗೂರು ಬಳಿಯಿರುವ ಅಕ್ಷಯ ನಗರದಲ್ಲಿ ಈ ಕೆರೆಯಿದ್ದು, ಗಂಗಾ ಆರತಿ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡರು. ಈ ಕೆರೆಯ ಪುನರುಜ್ಜೀವನದಲ್ಲಿ ಪ್ರಮುಖ ಪಾತ್ರವಹಿಸಿದರು ಜಲನಿಧಿ ತಂಡದ ಸದಸ್ಯರು ಕಾರ್ಯಕ್ರಮ ಆಯೋಜಿಸಿದ್ದರು.

ಕಾರ್ಯಕ್ರಮವನ್ನು ಪರ್ಯಾವರಣ ಗತಿ ವಿಧಿಯ ಮುಖ್ಯಸ್ಥ ಗಣಪತಿ ಹೆಗಡೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಣಿಪುರದಲ್ಲಿ ಹುತಾತ್ಮರಾದ ಸೈನಿಕರಿಗೆ ಒಂದು ನಿಮಿಷಗಳ ಭಾವ ನಮನ ಸಲ್ಲಿಸಲಾಯಿತು. ನಂತರ ಜಲ ಜಾಗೃತಿಯ ಬಗ್ಗೆ ಕಿರು ಪ್ರಹಸನ ಮತ್ತು ಮನರಂಜನಾ ಕಾರ್ಯಕ್ರಮಗಳು ನಡೆದವು. ಆ ಬಳಿಕ ಕಲಶ ಪೂಜೆ ನಡೆಸಿ, ವೇದಾಘೋಷಗಳೊಂದಿಗೆ ಗಂಗಾ ಆರತಿಯನ್ನು ಪ್ರಾರಂಭಿಸಲಾಯಿತು. ಕೆರೆಗೆ ಪರಿಕ್ರಮಣ ನಡೆಸಿ ಗಂಗಾ ಆರತಿ ನಡೆಸಲಾಯಿತು. ಕೆರೆಯಲ್ಲಿ ತೆಪ್ಪದ ಮೂಲಕ ಸಾಗಿ ದೀಪಾರಾಧಾನೆ ಮಾಡಲಾಯಿತು. ಇಡೀ ಕೆರೆಯ ಪರಿಸರವನ್ನು ಸಾಲು ಸಾಲು ದೀಪಗಳಿಂದ ಅಲಂಕರಿಸಲಾಗಿತ್ತು. ಕೆರೆಯ ನೀರನ್ನು ಪವಿತ್ರ ಗಂಗೆಯೆಂದು ಪೂಜಿಸುವ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಎಂ. ಕೃಷ್ಣಪ್ಪ ಹಾಜರಿದ್ದರು.

ಬೆಂಗಳೂರು (ನ.15): ಕಾರ್ತಿಕ ಮಾಸದಲ್ಲಿ ನಿಮಿತ್ತ ಅಕ್ಷಯ ನಗರದ ಕೆರೆಯಲ್ಲಿ ಗಂಗಾ ಆರತಿ ಕಾರ್ಯಕ್ರಮವನ್ನು ಶ್ರದ್ಧಾಪೂರ್ವಕವಾಗಿ ನೆರವೇರಿಸಲಾಯಿತು. ಸ್ಥಳೀಯ ಜನರ ಸಹಕಾರದಿಂದ ಪುನರುಜ್ಜೀವನಗೊಂಡಿರುವ ಐದೂವರೆ ಎಕರೆ ವಿಸ್ತಿರ್ಣದ ಈ ಕೆರೆಯಲ್ಲಿ ಸತತ ಐದು ವರ್ಷಗಳಿಂದ ಗಂಗಾ ಆರತಿ ಕಾರ್ಯಕ್ರಮ ನಡೆಯುತ್ತಿದೆ. ಬೇಗೂರು ಬಳಿಯಿರುವ ಅಕ್ಷಯ ನಗರದಲ್ಲಿ ಈ ಕೆರೆಯಿದ್ದು, ಗಂಗಾ ಆರತಿ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡರು. ಈ ಕೆರೆಯ ಪುನರುಜ್ಜೀವನದಲ್ಲಿ ಪ್ರಮುಖ ಪಾತ್ರವಹಿಸಿದರು ಜಲನಿಧಿ ತಂಡದ ಸದಸ್ಯರು ಕಾರ್ಯಕ್ರಮ ಆಯೋಜಿಸಿದ್ದರು.

Gangajal: ಗ್ರಹದೋಷಗಳಿಂದ ಕೆಟ್ಟ ದೃಷ್ಟಿಯವರೆಗೆ ಇದರ ಪ್ರಯೋಜನ ಹಲವು

ಕಾರ್ಯಕ್ರಮವನ್ನು ಪರ್ಯಾವರಣ ಗತಿ ವಿಧಿಯ ಮುಖ್ಯಸ್ಥ ಗಣಪತಿ ಹೆಗಡೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಣಿಪುರದಲ್ಲಿ ಹುತಾತ್ಮರಾದ ಸೈನಿಕರಿಗೆ ಒಂದು ನಿಮಿಷಗಳ ಭಾವ ನಮನ ಸಲ್ಲಿಸಲಾಯಿತು. ನಂತರ ಜಲ ಜಾಗೃತಿಯ ಬಗ್ಗೆ ಕಿರು ಪ್ರಹಸನ ಮತ್ತು ಮನರಂಜನಾ ಕಾರ್ಯಕ್ರಮಗಳು ನಡೆದವು. ಆ ಬಳಿಕ ಕಲಶ ಪೂಜೆ ನಡೆಸಿ, ವೇದಾಘೋಷಗಳೊಂದಿಗೆ ಗಂಗಾ ಆರತಿಯನ್ನು ಪ್ರಾರಂಭಿಸಲಾಯಿತು. ಕೆರೆಗೆ ಪರಿಕ್ರಮಣ ನಡೆಸಿ ಗಂಗಾ ಆರತಿ ನಡೆಸಲಾಯಿತು. ಕೆರೆಯಲ್ಲಿ ತೆಪ್ಪದ ಮೂಲಕ ಸಾಗಿ ದೀಪಾರಾಧಾನೆ ಮಾಡಲಾಯಿತು. ಇಡೀ ಕೆರೆಯ ಪರಿಸರವನ್ನು ಸಾಲು ಸಾಲು ದೀಪಗಳಿಂದ ಅಲಂಕರಿಸಲಾಗಿತ್ತು.  

Video Top Stories