Asianet Suvarna News Asianet Suvarna News

ಭಲೇ ವೀರ.. 80 ಕೆಜಿ ತೂಕದ ಕಬ್ಬನ್ನು ಹೊತ್ತು 3 ಕಿಮೀ ನಡೆದ ಸಾಹಸಿ ಇವರು..!

ಇಲ್ಲೊಬ್ಬ ಯುವಕ 80 ಕೆಜಿ ತೂಕದ ಕಬ್ಬನ್ನು ಹೆಗಲು ಮೇಲೆ ಇಟ್ಟುಕೊಂಡು 3 ಕಿಲೋಮೀಟರ್ ದೂರ ನಡೆದು ಸಾಹಸ ಮೆರೆದಿದ್ದಾನೆ.
 

ಬೆಳಗಾವಿ (ಜ. 04): ಉತ್ತರ ಕರ್ನಾಟಕ ಅದರಲ್ಲೂ ಅಥಣಿ ಬಾಗದ ಜನರು ಮಾತಿನ ಮ್ಯಾಲ ನಿಲ್ಲುವ ಜನರು. ಯಾರಾದ್ರೂ ಸವಾಲ್​ ಹಾಕಿದ್ರೆ ಸಾಕು ಅದನ್ನು ಮಾಡ್ದೇ ಬಿಡೋದಿಲ್ಲ. ಅದರಂತೆ ಇಲ್ಲೊಬ್ಬ ಯುವಕ "ನನಗೆ ಸವಾಲು ಹಾಕುತ್ತಾರಾ..?"  ಅನ್ನುತ್ತಾ 80 ಕೆಜಿ ತೂಕದ ಕಬ್ಬನ್ನು ಹೆಗಲು ಮೇಲೆ ಇಟ್ಟುಕೊಂಡು 3 ಕಿಲೋಮೀಟರ್ ದೂರ ನಡೆದು ಸಾಹಸ ಮೆರೆದಿದ್ದಾನೆ.

  ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ಮಹೇಶ್ ಗಸ್ತಿ ಎನ್ನುವವರಿಗೆ 3 ಕಿಲೋಮೀಟರ್ ದೂರದ ಮಡ್ಡಿ ಪೀರ್ ದರ್ಗಾದ ವರೆಗೆ 80 ಕೆಜಿ ತೂಕದ ಕಬ್ಬನ್ನು ಹೊತ್ತುಕೊಂಡು ಹೋದ್ರೆ ಐದು ಸಾವಿರ ರೂಪಾಯಿ ಕೊಡುತ್ತೇನೆ ಎಂದು ಒಬ್ಬರು ಸವಾಲು ಹಾಕುತಿದ್ದಂತೆ. ಸವಾಲನ್ನು ಸ್ವೀಕರಿಸಿದ ಮಹೇಶ್​ 80 ಕೆಜಿ ತೂಕದ ಕಬ್ಬು ಹೊತ್ತು ಸಾಗಿ ಗುರಿ ಮುಟ್ಟಿದ್ದಾನೆ.

ಬೆಂಗಳೂರು ; ಅಸಲಿ ಮೇಲೆ ಹೊಡೆದಂತೆ ನಕಲಿ..RTO, ಆಧಾರ್ ಎಲ್ಲವೂ!

Video Top Stories