Asianet Suvarna News Asianet Suvarna News

ಘಟಪ್ರಭೆ ಪ್ರವಾಹ: ಟ್ರಾಕ್ಟರ್ ಟ್ರ್ಯಾಲಿಯಲ್ಲೇ ನೆರೆ ಸಂತ್ರಸ್ತ ಕುಟುಂಬ ವಾಸ

ಮಳೆ ತಗ್ಗಿದರೂ ಪ್ರವಾಹ ಮಾತ್ರ ತಗ್ಗಿಲ್ಲ. ಘಟಪ್ರಭೆ ನೀರು ನುಗ್ಗಿ ಬಹುತೇಕ ಮನೆಗಳು ಜಲಾವೃತಗೊಂಡಿವೆ. ಮನೆ ಜಲಾವೃತಗೊಂಡಿದ್ದರಿಂದ ಟ್ರ್ಯಾಕ್ಟರ್ ಟ್ರೈಲರ್‌ನ್ನೇ ಮನೆ ಮಾಡಿಕೊಂಡು ನೆರೆ ಸಂತ್ರಸ್ತ ಕುಟುಂಬ ವಾಸ ಮಾಡುತ್ತಿದೆ.  ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ಈ ದೃಶ್ಯ ಕಂಡು ಬಂದಿದೆ. 
 

ಬೆಳಗಾವಿ (ಆ. 20): ಮಳೆ ತಗ್ಗಿದರೂ ಪ್ರವಾಹ ಮಾತ್ರ ತಗ್ಗಿಲ್ಲ. ಘಟಪ್ರಭೆ ನೀರು ನುಗ್ಗಿ ಬಹುತೇಕ ಮನೆಗಳು ಜಲಾವೃತಗೊಂಡಿವೆ.  ಮನೆ ಜಲಾವೃತಗೊಂಡಿದ್ದರಿಂದ ಟ್ರ್ಯಾಕ್ಟರ್ ಟ್ರೈಲರ್‌ನ್ನೇ ಮನೆ ಮಾಡಿಕೊಂಡು ನೆರೆ ಸಂತ್ರಸ್ತ ಕುಟುಂಬ ವಾಸ ಮಾಡುತ್ತಿದೆ.  ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ಈ ದೃಶ್ಯ ಕಂಡು ಬಂದಿದೆ. 

ಪ್ರವಾಹಕ್ಕೆ ತತ್ತರಿಸಿದ ಗೋಕಾಕ್; ಪರಿಹಾರ ಕೇಂದ್ರದಲ್ಲಿ ಬಾಣಂತಿ ಪರದಾಟ

ಕಳೆದ ಬಾರಿ ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದ ಈ ಕುಟುಂಬ, ಈಗ ಕಟ್ಟಿಸುತ್ತಿದ್ದ ನಿರ್ಮಾಣ ಹಂತದ ಮನೆಯೂ ಜಲಾವೃತಗೊಂಡ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲೇ ಆಸರೆ ಪಡೆದಿದೆ. ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿ ಪರಿಹಾರ ಕೇಂದ್ರ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಸಾರ್‌ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

Video Top Stories