ತೋಟದ ಮನೆಗೆ ಬೆಂಕಿ: ಜೀವದ ಹಂಗು ತೊರೆದು ಜಾನುವಾರು ರಕ್ಷಣೆಗೆ ಮುಂದಾದ ರೈತ... ವಿಡಿಯೋ ವೈರಲ್‌

ಖಾನಾಪುರ ತಾಲೂಕಿನ‌ ಅವರೊಳ್ಳಿ ಗ್ರಾಮದಲ್ಲಿ ತೋಟದ ಮನೆಗೆ ಬೆಂಕಿ ಬಿದ್ದಿದ್ದು, ಪರಿಣಾಮ ಬೆಂಕಿಯ ನಡುವೆ ಸಿಲುಕಿದ್ದ  ಜಾನುವಾರುಗಳನ್ನು ರಕ್ಷಿಸಲು  ರೈತರೊಬ್ಬರು ಹರಸಾಹಸ ಪಟ್ಟಿದ್ದಾರೆ.

First Published Jan 20, 2022, 2:31 PM IST | Last Updated Jan 20, 2022, 2:41 PM IST

ಬೆಳಗಾವಿ: ಖಾನಾಪುರ ತಾಲೂಕಿನ‌ ಅವರೊಳ್ಳಿ ಗ್ರಾಮದಲ್ಲಿ ತೋಟದ ಮನೆಗೆ ಬೆಂಕಿ ಬಿದ್ದಿದ್ದು, ಪರಿಣಾಮ ಬೆಂಕಿಯ ನಡುವೆ ಸಿಲುಕಿದ್ದ  ಜಾನುವಾರುಗಳನ್ನು ರಕ್ಷಿಸಲು  ರೈತರೊಬ್ಬರು ಹರಸಾಹಸ ಪಟ್ಟಿದ್ದಾರೆ. ನವರತ್ನ ಜೋಳದ ಎಂಬುವವರಿಗೆ ಸೇರಿದ ತೋಟದ ಮನೆಗೆ ತಡರಾತ್ರಿ ಆಕಸ್ಮಿಕವಾಗಿ  ಬೆಂಕಿ ಬಿದ್ದು ಹೊತ್ತಿ ಉರಿಯಲು ಶುರುವಾಗಿದೆ.

ಈ ವೇಳೆ ಜಾನುವಾರುಗಳ ರಕ್ಷಣೆಗಾಗಿ ಜೀವವನ್ನು ಲೆಕ್ಕಿಸದೇ ಬೆಂಕಿಯಲ್ಲಿ ನುಗ್ಗಿದ ರೈತ ಜಾನುವಾರುಗಳ ರಕ್ಷಣೆಗೆ ಮುಂದಾಗಿದ್ದಾರೆ. ಘಟನೆಯಲ್ಲಿ 1 ಕರು ಬೆಂಕಿಗಾಹುತಿಯಾಗಿದೆ. 2 ಎಮ್ಮೆ ಹಾಗೂ 1 ಹಸುವಿಗೆ ಗಂಭೀರ ಗಾಯವಾಗಿದೆ. ಅಲ್ಲದೇ ತೋಟದ ಮನೆಯಲ್ಲಿದ್ದ ಕೃಷಿ ಸಾಮಗ್ರಿಯೆಲ್ಲವೂ ಭಸ್ಮವಾಗಿದೆ. ಅಂದಾಜು 80 ಸಾವಿರಕ್ಕೂ ಹೆಚ್ಚು ಹಾನಿಯಾಗಿದ್ದು, ನಂದಗಡ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Farmer Land Auctioned in Rajasthan : ಬಡವ ಸಾಲ ಕಟ್ಟದಿದ್ರೆ ಭೂಮಿ ಹರಾಜು, ಶ್ರೀಮಂತ ಕಟ್ಟದಿದ್ರೆ ಲಂಡನ್ ಟಿಕೆಟು!

Video Top Stories