Asianet Suvarna News Asianet Suvarna News

ತುಂಬಿದ ಸ್ಮಶಾನಗಳು: ಅಂತ್ಯಕ್ರಿಯೆಗೆ 5 ಹೊಸ ಸ್ಥಳಗಳನ್ನು ಗುರುತಿಸಿದ BBMP

Sep 20, 2019, 10:06 PM IST

ಬೆಂಗಳೂರು, [ಸೆ.20]: ವಿದ್ಯುತ್ ಚಿತಾಗಾರದಲ್ಲಿ ಶವ ಸಂಸ್ಕಾರ ಮಾಡಲು ಶುಲ್ಕ ದುಬಾರಿಯಾದ್ರೆ, ಒಂದೆಡೆ ಹಲವರು ವಿದ್ಯುತ್ ಚಿತಾಗಾರದಲ್ಲಿ ಶವ ಸಂಸ್ಕಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದ್ರಿಂದ ಈಗ ಇರುವ ಸ್ಮಶಾನದ ಜಾಗಗಳು ಕೂಡ ಭರ್ತಿಯಾಗುತ್ತಿದ್ದು,. ಮುಂದಿನ ದಿನಗಳಲ್ಲಿ ಮೃತಪಟ್ಟವರನ್ನು ಎಲ್ಲಿ ಅಂತ್ಯಸಂಸ್ಕಾರ ಮಾಡಬೇಕೆನ್ನುವುದು ಬಿಬಿಎಂಪಿಗೆ ದೊಡ್ಡ ತಲೆನೋವಾಗಿತ್ತು. ಇದಕ್ಕೆ ಬಿಬಿಎಂಪಿ, ನಗರದಲ್ಲಿ ಹೊಸ ಐದು ಸ್ಥಳಗಳನ್ನು ಹುಡುಕಿದ್ದು, ಇದಕ್ಕೆ ಕಾಂಪೌಂಡ್ ಸೇರಿದಂತೆ ಜಾಗ ಸ್ವಚ್ಛಗೊಳಿಸಲು  40 ಕೋಟಿ ರು. ಮೀಸಲಿಟ್ಟಿದೆ. ಇನ್ನು ಈ ಐದು ಹೊಸ ಸ್ಮಶಾನದ ಸ್ಥಳಗಳು ಎಲ್ಲಿವೆ? ಬಿಬಿಎಂಪಿ ಮೇಯರ್ ಅವರ ಬಾಯಿಂದಲೇ ಕೇಳಿ.