ಬಾಲಕಿಯರ ಹಾಸ್ಟೆಲ್ ಮುಂದೆ ಬಾರ್! ಆತಂಕದಲ್ಲಿ ಕಾಫಿನಾಡಿನ ವಿದ್ಯಾರ್ಥಿನಿಯರು
ಅದು ನಗರದ ಹೃಯದ ಭಾಗ, ಅಲ್ಲಿ ಕಾಲೇಜ್ , ಹಾಸ್ಟೆಲ್ ಗಳು, ಬಾಲಕೀಯರ ವಸತಿ ನಿಲಯ , ಪಿಜಿ ಸೇರಿದಂತೆ ಎಲ್ಲಾವೂ ಒಂದಡೆ ಇರುವ ಜಾಗ .ಈ ಕಾರಣಕ್ಕಾಗಿ ಸೈಲಾಂಟಗಿರೋ ಏರಿಯಾ ಅಂತಾನೇ ವಿದ್ಯಾರ್ಥಿಗಳು ಇಷ್ಟ ಪಡ್ತಾರೆ. ಸದಾ ವಿದ್ಯಾರ್ಥಿಗಳ ಕಲರವ, ಓಡಾಟ, ಆಟ-ಪಾಠ ಅಂತ ತಿರುಗಾಡೋ ವಿದ್ಯಾರ್ಥಿಗಳೇ ಹೆಚ್ಚು. ಆದರೆ ಈಗ ಇವುಗಳ ಮಧ್ಯೆ ಅಬಕಾರಿ ಇಲಾಖೆ ಬಾರ್ ಅಂಡ್ ಶಾಪ್ ನಡೆಸಲು ಖಾಸಗೀಯವರಿಗೆ ಅನುಮತಿ ನೀಡಲು ಮುಂದಾಗಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಚಿಕ್ಕಮಗಳೂರು (ಡಿ.24): ನಗರದ ಹೃದಯ ಭಾಗವಾದ ಎಐಟಿ ವೃತ್ತ, ಇಲ್ಲಿ ಐಡಿಎಸ್ ಜಿ , ಎಐಟಿ ಇಂಜಿನಿಯರಿಗ್ , ನರ್ಸಿಗ್ ಕಾಲೇಜ್ ಸೇರಿದಂತೆ ಹಾಸ್ಟೆಲ್ ಗಳು, ಬಾಲಕೀಯರ ವಸತಿ ನಿಲಯ , ಪಿಜಿ ಸೇರಿದಂತೆ ಎಲ್ಲಾವೂ ಒಂದಡೆ ಇರುವ ಜಾಗ. ಆದ್ರೆ ಇದೇ ಜಾಗದಲ್ಲಿ ಈಗ ಬಾರ್ ಅಂಡ್ ರೆಸ್ಟೋರೇಂಟ್ ನಡೆಸುವ ಗುಮ್ಮ ವಿದ್ಯಾರ್ಥಿಗಳ ನಿದ್ದೆ ಕೆಡಿಸಿದೆ.
ಅದೂ ಕೂಡ ದಿ.ದೇವರಾಜ್ ಅರಸು ಬಾಲಕಿಯರ ವಸತಿ ನಿಲಯದ ಮುಂಭಾಗದಲ್ಲೇ ಸಿದ್ದತೆ ನಡೆದಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿರುವುದು. ಇನ್ನೇನು ಕೆಲವೆ ದಿನಗಳಲ್ಲಿ ತಮ್ಮ ಏರಿಯಾದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತಲೆ ಎತ್ತಲಿದೆ ಎನ್ನುವ ವಿಷಯ ತಿಳಿದು ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕಡೂರು ಮೂಲದ ಖಾಸಗಿ ವ್ಯಕ್ತಿಗೆ ಚಿಕ್ಕಮಗಳೂರು ಅಬಕಾರಿ ಇಲಾಖೆ ಬಾರ್ ಅಂಡ್ ರೆಸ್ಟೋರೆಂಟ್ ನಡೆಸಲು ಅನುಮತಿ ನೀಡಲು ಮುಂದಾಗಿದೆ. ಕೇವಲ 50 ಮೀಟರ್ ಅಂತರದಲ್ಲಿ ಬಾಲಕಿಯರ ವಿದ್ಯಾರ್ಥಿ ನಿಲಯ ಇದ್ದರೂ ಯಾವುದನ್ನು ಪರಿಗಣೆನೆಗೆ ತೆಗೆದುಕೊಳ್ಳದೆ ಇಲಾಖೆ ಅನುಮತಿ ನೀಡಲು ಮುಂದಾಗಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬಾರ್ ನಡೆಸಲು ಅನುಮತಿ ನೀಡಿರುವ ಈ ಸ್ಥಳದಲ್ಲಿ ಹಲವು ಮನೆಗಳಿದ್ದು, ನಿತ್ಯ ಸಾವಿರಾರು ವಿದ್ಯಾರ್ಥಿಗಳು ವೈನ್ ಶಾಪ್ ಮುಂದೆಯೇ ನಡೆದು ಹೋಗಬೇಕು. ಬಾರ್ ನ್ನು ನಡೆಸಲು ಅಬಕಾರಿ ಅಧಿಕಾರಿಗಳು ಯಾವ ಕಾರಣ ನೀಡಿದ್ದರೂ ಗೊತ್ತಿಲ್ಲ, 100 ಮೀಟರ್ ಅಂತರದಲ್ಲಿ ಯಾವುದೇ ಶಾಲಾ-ಕಾಲೇಜುಗಳು, ವಸತಿ ಸಮುಚ್ಚಯಗಳಿರುವ ಕಡೆ ಅನುಮತಿ ನೀಡಲು ಅವಕಾಶವಿಲ್ಲದಿದ್ದರು ಅಬಕಾರಿ ಇಲಾಖೆಗೆ ಅನುಮತಿಗಾಗಿ ಪತ್ರ ಹೋಗಿದೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಕಾಲೇಜ್ ಏರಿಯಾದಲ್ಲಿ ಬಾರ್ ಅಂಡ್ ರೆಸ್ಟೋರೇಂಟ್ ತೆರಯಲು ಅನುಮತಿ ನೀಡಬಾರದು ಎಂದು ವಿನಂತಿ ಮಾಡಿದ್ದಾರೆ.
ಇದನ್ನೂ ಓದಿ | ವಾಟ್ಸಪ್‌ನಿಂದ ಇಂಥಾ ಕೆಲ್ಸಾನೂ ಮಾಡ್ಬಹುದಾ, ನಮ್ಮುಡುಗ್ರಿಗೊಂದು ಸಲಾಂ!...
ಒಟ್ನಲ್ಲಿ ನಾವು ಮಾಡಿದ್ದೆ ಕಾನೂನು, ಹೇಳಿದ್ದೆ ವೇದ ವಾಕ್ಯ ಅನ್ನೋ ಅಧಿಕಾರಿಗಳ ವರ್ತನೆಯಿಂದ ಸ್ಥಳೀಯ ನಿವಾಸಿಗಳು , ವಿದ್ಯಾರ್ಥಿಗಳು ಆತಂಕಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಬಾರ್ ಅಂಡ್ ರೆಸ್ಟೋರೇಂಟ್ ತಲೆ ಎತ್ತಿದ್ದಾರೆ ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ವಿದ್ಯಾರ್ಥಿ ಸಂಘಟನೆಗಳು ನೀಡುವೆ ,ಇದಕ್ಕೆ ಅಬಕಾರಿ ಇಲಾಖೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ ಕಾದ್ದು ನೋಡಬೇಕಾಗಿದೆ.