ಶಿವಮೊಗ್ಗದಲ್ಲಿ ಹೊತ್ತಿಕೊಂಡ. ಮೀಸಲಾತಿ ಕಿಚ್ಚು..ಮೀಸಲಾತಿ ಬೆಂಕಿಯ ಹಿನ್ನೆಲೆ ಏನು..?
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಂಜಾರ ಮತ್ತು ಭೋವಿ ಸಂಘಟನೆ ಒಳ ಮೀಸಲಾತಿ ವಿರುದ್ದ ಹಮ್ಮಿಕೊಂಡಿದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿರುವ ಘಟನೆ ನಡೆದಿದೆ. ಇಷ್ಟಕ್ಕು ಒಳ ಮೀಸಲಾತಿ ಕುರಿತು ಪರ ವಿರೋಧವಿರುವುದು ಏಕೆ..? ಈ ವಿಡಿಯೋ ನೋಡಿ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಂಜಾರ ಮತ್ತು ಭೋವಿ ಸಂಘಟನೆ ಹಮ್ಮಿಕೊಂಡಿದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿರುವ ಘಟನೆ ನಡೆದಿದೆ. ರಾಜ್ಯ ಸರ್ಕಾರದ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಶಿಕಾರಿಪುರದಲ್ಲಿ ತಾಲ್ಲೂಕು ಬಂಜಾರ ಸಂಘಟನೆ ಮಾಜಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದೆ. ಇನ್ನು ಪರಿಶಿಷ್ಟ ಜಾತಿಯಲ್ಲಿನ ಮೀಸಲಾತಿ ವರ್ಗೀಕರಣ ಸಂಬಂಧಿಸಿದಂತೆ ಸದಾಶಿವ ವರದಿಯಿದೆ. ಈಗರಿವು ಮೀಸಲಾತಿಯಲ್ಲಿ ಮರು ವರ್ಗೀಕರಣವಾಗಬೇಕು ಅನ್ನೋದು ಸದಾಶಿವ ವರದಿ ಹೇಳುತ್ತೆ. ಈ ವರದಿ ರಾಜ್ಯದಲ್ಲಿ ಜಾರಿಗೆ ತುರುವುದಕ್ಕಾಗಿ ಈ ಹಿಂದೆ ಹಲವು ಬೇರೆ ಪಕ್ಷಗಳು ಸಹ ಅಧಿಕಾರಲ್ಲಿದ್ದಾಗ ಪ್ರಯತ್ನಿಸಿದ್ದರು. ಆದರೆ ಯಾವ ಪಕ್ಷವೂ ಧೈರ್ಯ ಮಾಡಿರಲಿಲ್ಲ. ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಸಹ ಸದಾಶಿವ ವರದಿಗೆ ಕೈ ಹಾಕುವ ಧೈರ್ಯ ಮಾಡಿರಲಿಲ್ಲ. ಆದರೆ ಇಂದಿನ ಬೊಮ್ಮಾಯಿ ಸರ್ಕಾರ ಸದಾಶಿವ ವರದಿ ಶಿಫಾರಸ್ಸನ್ನು ಕೇಂದ್ರಕ್ಕೆ ಕಳುಹಿಸಲು ತೀರ್ಮಾನಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ರಾಜ್ಯ ಸರ್ಕಾರದ ಈ ನಡೆಯನ್ನು ವಿರೋಧಿಸಿ ಶಿಕಾರಿಪುರ ಈ ಪ್ರತಿಭಟನೆ ನಡೆದಿದ್ದು.