Asianet Suvarna News Asianet Suvarna News

ಯುವತಿಯೊಂದಿಗೆ ಸ್ನೇಹ, ಮನೆಯವರಿಂದ ವಿರೋಧ, ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಯುವತಿ ಜೊತೆ ಸ್ನೇಹ ಮಾಡಿದ್ದಕ್ಕೆ ಯುವತಿ ಮನೆಯವರು ಯುವಕನ ತಂದೆ ಹಾಗೂ ಯುವಕನ ಚಿಕ್ಕಪ್ಪನ‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇಲ್ಲಿನ ಕೌಲ್ ಬಜಾರ್ ಪ್ರದೇಶದಲ್ಲಿ ಡಿಸೆಂಬರ್ 7 ರಂದು ನಡೆದ ಘಟನೆ ಇದು. 

First Published Dec 14, 2020, 4:08 PM IST | Last Updated Dec 14, 2020, 5:46 PM IST

ಬಳ್ಳಾರಿ (ಡಿ. 14): ಯುವತಿ ಜೊತೆ ಸ್ನೇಹ ಮಾಡಿದ್ದಕ್ಕೆ ಯುವತಿ ಮನೆಯವರು ಯುವಕನ ತಂದೆ ಹಾಗೂ ಯುವಕನ ಚಿಕ್ಕಪ್ಪನ‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇಲ್ಲಿನ ಕೌಲ್ ಬಜಾರ್ ಪ್ರದೇಶದಲ್ಲಿ ಡಿಸೆಂಬರ್ 7 ರಂದು ನಡೆದ ಘಟನೆ ಇದು.

ಕೌಲ್ ಬಜಾರ್ ಏರಿಯಾದ ಯುವಕ ಪೈಜುಲ್ ಹಾಗೂ ಯುವತಿ ಅಬಿದಾ ನಡುವೆ ಸ್ನೇಹ ಬೆಳೆದಿತ್ತು. ಇದು ಮನೆಯವರಿಗೆ ಗೊತ್ತಾಗಿ ಮಾತನಾಡದಂತೆ ಇಬ್ಬರಿಗೂ ವಾರ್ನಿಂಗ್ ಕೊಟ್ಟಿದ್ದರು. ಆದರೂ ಸ್ನೇಹ ಮುಂದುವರೆಸಿದ್ದಕ್ಕೆ ಅಬಿದಾ ತಂದೆ ಹಾರೀಫ್ , ಚಿಕ್ಕಪ್ಪ ಹಿದಾಯತ್ ಸೇರಿ ಎಂಟು ಜನರು ಯುವಕ‌ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ. 

ಬಳ್ಳಾರಿ ವಿಭಜನೆ ಖಂಡಿಸಿ ಧರಣಿ; ಪ್ರತಿಭಟನಾಕಾರರು, ಪೊಲೀಸರ ನಡುವೆ ವಾಗ್ವಾದ

ಘಟನೆಯಲ್ಲಿ ಫೈಜುಲ್ ತಂದೆ ವಲಿಭಾಷಾ ಹಾಗೂ ಚಿಕ್ಕಪ್ಪ ನಿಸಾರ್ ಅಹಮದ್‌ಗೆ ಗಂಭೀರ ಗಾಯಗೊಂಡಿದ್ದುಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ, ಎಂಟು ಜನರ ವಿರುದ್ದ ಎಫ್ಐಆರ್ ದಾಖಲಾಗಿದೆ.