ಬಳ್ಳಾರಿ: ಮಹಾಮಾರಿ ಕೊರೋನಾದಿಂದ ಗುಣಮುಖರಾದ್ರೂ ಊರಿಗೆ ಬರಬೇಡಿ..!

ಕೋವಿಡ್‌ ಸೋಂಕಿನಿಂದನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ| ಕೊರೋನಾದಿಂದ ಗುಣಮುಖರಾದ್ರೂ ಬರಬೇಡಿ ಎಂದು ಹೇಳುತ್ತಿರುವ ಗ್ರಾಮಸ್ಥರು|  ಜನರ ಅಮಾನವೀಯ ವರ್ತನೆಗೆ ಜಿಲ್ಲಾಧಿಕಾರಿ ಬೇಸರ| 

First Published Jun 11, 2020, 11:51 AM IST | Last Updated Jun 11, 2020, 2:26 PM IST

ಬಳ್ಳಾರಿ(ಜೂ.11): ಮಹಾಮಾರಿ ಕೊರೋನಾದಿಂದ ಗುಣಮುಖರಾದರೂ ಹೆಮ್ಮಾರಿ ಕಾಟ ತಪ್ಪುತ್ತಿಲ್ಲ. ಹೌದು, ಕೋವಿಡ್‌ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರೂ ಗ್ರಾಮಗಳಿಗೆ ಬರಬೇಡಿ ಎಂದು ಗ್ರಾಮಸ್ಥರು ಪಟ್ಟು ಹಿಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. 

ರಾಜ್ಯದ ಸುಪ್ರಸಿದ್ದ ಮಠದ ಸ್ವಾಮೀಜಿಗೆ ಅಂಟಿದ ಕೊರೋನಾ ಸೋಂಕು..!

ಹಗರಿಬೊಮ್ಮನಹಳ್ಳಿ ಹಾಗೂ ಕೂಡ್ಲಿಗಿ ತಾಲೂಕಿನ ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ಅವರನ್ನ ಆಂಬುಲೆನ್ಸ್‌ ಮೂಲಕ ಅವರ ಮನೆಗಳಿಗೆ ತಲುಪಿಸಲು ಹೋದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಕೊರೋನಾ ವೈರಸ್‌ ಹೋಗೋವರೆಗೂ ನೀವು ಇಲ್ಲಿಗೆ ಬರಬೇಡಿ ಎಂದು ಜನರು ಪಟ್ಟು ಹಿಡಿದಿದ್ದಾರೆ. 
 

Video Top Stories