ಬಿಯರ್ ಬೇಡ, ನೀರು ಬೇಕು; ನದಿ ಮಧ್ಯೆ ನಿಂತು ನೂರಾರು ಮಹಿಳೆಯರ ಪ್ರತಿಭಟನೆ

ಮದ್ಯ ಮುಕ್ತ ಕರ್ನಾಟಕಕ್ಕೆ ಆಗ್ರಹಿಸಿ ನೀರಿಗಿಳಿದಿದ್ದಾರೆ ಮಹಿಳೆಯರು. ಸಾಮಾನ್ಯವಾಗಿ ಬೀದಿಗಿಳಿದು ಪ್ರತಿಭಟಿಸಿದರೆ ಇವರು ನೀರಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಬಾಗಲಕೋಟೆಯ ಕೂಡಲಸಂಗಮದಲ್ಲಿ ಇಂತದ್ದೊಂದು ವಿನೂತನ ಪ್ರತಿಭಟನೆ ಕಂಡು ಬಂದಿದೆ.

 

First Published Jan 28, 2020, 3:42 PM IST | Last Updated Jan 28, 2020, 3:42 PM IST

ಬಾಗಲಕೋಟೆ (ಜ. 28): ಮದ್ಯ ಮುಕ್ತ ಕರ್ನಾಟಕಕ್ಕೆ ಆಗ್ರಹಿಸಿ ನೀರಿಗಿಳಿದಿದ್ದಾರೆ ನೀರೆಯರು. ಸಾಮಾನ್ಯವಾಗಿ ಬೀದಿಗಿಳಿದು ಪ್ರತಿಭಟಿಸಿದರೆ ಇವರು ನೀರಿಗಿಳಿದು ಪ್ರತಿಭಟಿಸುತ್ತಿದ್ದಾರೆ.

ಬಾದಾಮಿ ಬನಶಂಕರಿ ಜಾತ್ರೆಯಲ್ಲಿ 'ಹೌದ್ದ ಹುಲಿಯಾ' ಪೀರಪ್ಪ ಪ್ರತ್ಯಕ್ಷ!

ಬಾಗಲಕೋಟೆಯ ಕೂಡಲಸಂಗಮದಲ್ಲಿ ಇಂತದ್ದೊಂದು ವಿನೂತನ ಪ್ರತಿಭಟನೆ ಕಂಡು ಬಂದಿದೆ. ಮದ್ಯ ನಿಷೇಧಕ್ಕೆ ಒತ್ತಾಯಿಸಿ ನೂರಾರು ಮಹಿಳೆಯರು ನದಿಗಿಳಿದು ಪ್ರತಿಭಟಿಸಿದ್ದಾರೆ.  ಬಿಯರ್ ಬೇಡ, ನೀರು ಬೇಕು ಎಂದು ಕೂಗುತ್ತಿದ್ದಾರೆ. ಈ ಆಂದೋಲನಕ್ಕೆ 51 ಸಂಘಟನೆಗಳು ಸಾಥ್ ನೀಡಿವೆ.