ಅಂಗಾಂಗ ಕಳೆದುಕೊಂಡಿದ್ದೇನೆ, ದೇಶಾಭಿಮಾನವನ್ನಲ್ಲ: ಕಾರ್ಗಿಲ್ ವೀರ!
ಇಂದು ದೇಶಾದ್ಯಂತ ಕಾರ್ಗಿಲ್ ಯುದ್ಧದ 20ನೇ ವರ್ಷದ ಸಂಭ್ರಮಾಚರಣೆ ಆಚರಿಸಲಾಗುತ್ತಿದೆ.ಅದರಂತೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹುಲಸಗಿರಿ ಗ್ರಾಮದ ವೀರ ಯೋಧ ರಂಗಪ್ಪ ಆಲೂರು, ನಿಮ್ಮ ಸುವರ್ಣನ್ಯೂಸ್ ಜೊತೆ ಕಾರ್ಗಿಲ್ ಯುದ್ಧದ ನೆನಪುಗಳ ಬುತ್ತಿ ಬಿಚ್ಚಿದ್ದಾರೆ.
ಬಾಗಲಕೋಟೆ(ಜು.26): ಇಂದು ದೇಶಾದ್ಯಂತ ಕಾರ್ಗಿಲ್ ಯುದ್ಧದ 20ನೇ ವರ್ಷದ ಸಂಭ್ರಮಾಚರಣೆ ಆಚರಿಸಲಾಗುತ್ತಿದೆ. ದೇಶಕ್ಕಾಗಿ ಮಡಿದ, ಯುದ್ಧದಲ್ಲಿ ತಮ್ಮ ಅಂಗಾಂಗ ಕಳೆದುಕೊಂಡ ಸೈನಿಕರನ್ನು ದೇಶ ಸ್ಮರಿಸುತ್ತಿದೆ. ಅದರಂತೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹುಲಸಗಿರಿ ಗ್ರಾಮದ ವೀರ ಯೋಧ ರಂಗಪ್ಪ ಆಲೂರು, ನಿಮ್ಮ ಸುವರ್ಣನ್ಯೂಸ್ ಜೊತೆ ಕಾರ್ಗಿಲ್ ಯುದ್ಧದ ನೆನಪುಗಳ ಬುತ್ತಿ ಬಿಚ್ಚಿದ್ದಾರೆ. ಯುದ್ಧದಲ್ಲಿ ಪಾಕಿಗಳ ಗುಂಡೇಟಿನಿಂದ ತಮ್ಮ ಅಂಗಾಂಗ ಕಳೆದುಕೊಂಡಿರುವ ರಂಗಪ್ಪ ಆಲೂರು, ಯುದ್ಧದ ಭೀಕರ ಕ್ಷಣಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...