Asianet Suvarna News Asianet Suvarna News

ಬಾಗಲಕೋಟೆ: ಸಿಂಥೆಟಿಕ್ ಟ್ರ್ಯಾಕ್ ಇಲ್ಲದೇ ಕ್ರೀಡಾಪಟುಗಳ ಪರದಾಟ

- ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್, ವೆಲ್ಡ್ರೂಮ್ ವ್ಯವಸ್ಥೆ ಇಲ್ಲದೆ ಪರದಾಟ

- ಬೇರೆ ಜಿಲ್ಲೆಗಳಲ್ಲಿ  ರೂಮ್ ಮಾಡಿ ಪ್ರ್ಯಾಕ್ಟಿಸ್ ಮಾಡ್ತಿರೋ ಕ್ರೀಡಾಪಟುಗಳು

- ಇತ್ತ ಸೈಕ್ಲಿಸ್ಟ್‌ಗಳಿಗೂ ವೆಲ್ಡ್ರೂಮ್ ವ್ಯವಸ್ಥೆ ಇಲ್ಲದೆ ಪರದಾಟ, ರಸ್ತೆಗಳಲ್ಲೇ ಪ್ರಾಕ್ಟೀಸ್
 

First Published Oct 22, 2021, 5:00 PM IST | Last Updated Oct 22, 2021, 5:00 PM IST

ಬೆಂಗಳೂರು (ಅ.22):  ಬಾಗಲಕೋಟೆ ಜಿಲ್ಲೆ ಅಂದ್ರೆ ಸಾಕು ರಾಜ್ಯದಲ್ಲಿ ಸೈಕ್ಲಿಂಗ್ಗೆ ಫೇಮಸ್ ಅನ್ನೋ ಮಾತಿದೆ. ಈ ಜಿಲ್ಲೆಯ ಬಹುತೇಕರು ಇಂದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಆದ್ರೆ ಈ ಎಲ್ಲ ಕ್ರೀಡಾಪಟುಗಳಿಗೆ ಅಗತ್ಯವಾದ ವೆಲ್ಡ್ರೂಮ್ ಮತ್ತು ಸಿಂಥೆಟಿಕ್ ಟ್ರ್ಯಾಕ್ ಮಾತ್ರ ಇಲ್ಲಿಲ್ಲ.  

ಮುಖ್ಯವಾಗಿ ಇಲ್ಲಿ ವೆಲ್ಡ್ರೂಮ್ ವ್ಯವಸ್ಥೆ ಆಗಬೇಕಿದೆ. ಏಕೆಂದರೆ ಈಗಿರುವ ಕ್ರೀಡಾಂಗಣದ ವ್ಯವಸ್ಥೆಯಲ್ಲಿ ಪ್ರ್ಯಾಕ್ಟಿಸ್ ಸಾಧ್ಯವಿಲ್ಲ. ಹೀಗಾಗಿ ಬೇರೆ ಬೇರೆ ಊರುಗಳ ರಸ್ತೆಯಲ್ಲೇ ಪ್ರ್ಯಾಕ್ಟಿಸ್ ಮಾಡುವ ಮೂಲಕ ಸೈಕ್ಲಿಸ್ಟ್ಗಳು ಸಾಧನೆ ಮಾಡ್ತಿದ್ದಾರೆ. ಒಂದೊಮ್ಮೆ ಜಿಲ್ಲಾ ಕ್ರೀಡಾಂಗಣದಲ್ಲಿ ವೆಲ್ ಡ್ರೂಮ್ ವ್ಯವಸ್ಥೆ ಕಲ್ಪಿಸಿದಲ್ಲಿ ಜಿಲ್ಲೆಯ ಸೈಕ್ಲಿಸ್ಟ್ಗಳಿಗೆ ಇನ್ನಷ್ಟು ಸಾಧನೆ ಮಾಡಲು ಅತ್ಯಂತ ಅನುಕೂಲವಾಗಲಿದೆ ಅಂತಾರೆ ಅಂತಾರಾಷ್ಟ್ರೀಯ ಕ್ರೀಡಾಪಟುಗಳು. ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿ ಎಂಬುದು ಕ್ರೀಡಾಪಟುಗಳ ಆಗ್ರಹ. 
 

Video Top Stories