ಗೋವುಗಳಿಗೆ ಸೀಮಂತ ಕಾರ್ಯಕ್ರಮ ; ಶ್ರೀಗಳಿಂದ ಹೊಸ ನಿರ್ಣಯ
ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಮಾಡುವುದು ಸಾಮಾನ್ಯ ವಾಡಿಕೆ. ಆದ್ರೆ ಬಾಗಲಕೋಟೆಯಲ್ಲಿ ಸಾಮೂಹಿಕವಾಗಿ ಗೋವುಗಳಿಗೆ ಸೀಮಂತ ಮಾಡಲಾಗಿದೆ.
ಬಾಗಲಕೋಟೆ (ನ. 10): ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಮಾಡುವುದು ಸಾಮಾನ್ಯ ವಾಡಿಕೆ. ಆದ್ರೆ ಬಾಗಲಕೋಟೆಯಲ್ಲಿ ಸಾಮೂಹಿಕವಾಗಿ ಗೋವುಗಳಿಗೆ ಸೀಮಂತ ಮಾಡಲಾಗಿದೆ.
ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪೂರದ ಮಹಾಲಿಂಗೇಶ್ವರ ಮಠದ ಗೋ ಶಾಲೆಯಲ್ಲಿ ಸಾಮೂಹಿಕ ಗೋವುಗಳಿಗೆ ಸೀಮಂತ ಕಾರ್ಯ ಮಾಡಲಾಗಿದೆ. ಜೊತೆಗೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಅನ್ನ ಪ್ರಸಾದ ಕಾಯ೯ಕ್ರಮ ನೆರವೇರಿದೆ.