ಆಕಳು ಗೌರಿಗೆ ಮನೆ ಮಗಳಂತೆ ಸೀಮಂತ ಮಾಡಿದ ರೈತ
ಮನೆ ಮುಂದೆ ಶಾಮಿಯಾನ, ಕೊರಳಲ್ಲಿ ಹೂವಿನ ಹಾರ, ಚಂದುಳ್ಳ ಚೆಲುವೆಯಂತೆ ಸಿಂಗಾರಗೊಂಡಿರುವ ಈ ತಾಯಿಯ ಹೆಸರು ಗೌರಿ. ಕಳೆದ 5 ತಿಂಗಳ ಹಿಂದಷ್ಟೇ ಗೌರಿ ಗರ್ಭ ಧರಿಸಿದ್ದಾಳೆ. ಈಕೆಗೆ ಕುಟುಂಬದವರು ಸೀಮಂತ ಮಾಡಿದ್ದಾರೆ.
ಬೆಳಗಾವಿ (ಜ. 26): ಮನೆ ಮುಂದೆ ಶಾಮಿಯಾನ, ಕೊರಳಲ್ಲಿ ಹೂವಿನ ಹಾರ, ಚಂದುಳ್ಳ ಚೆಲುವೆಯಂತೆ ಸಿಂಗಾರಗೊಂಡಿರುವ ಈ ತಾಯಿಯ ಹೆಸರು ಗೌರಿ. ಕಳೆದ 5 ತಿಂಗಳ ಹಿಂದಷ್ಟೇ ಗೌರಿ ಗರ್ಭ ಧರಿಸಿದ್ದಾಳೆ. ಈಕೆಗೆ ಕುಟುಂಬದವರು ಸೀಮಂತ ಮಾಡಿದ್ದಾರೆ.
ಈ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾ. ಎಕ್ಸಂಬಾದಲ್ಲಿ. ಇಲ್ಲಿನ ನಿವಾಸಿ ತುಕಾರಾಂ ಮಾಳಿ ಆಕಳನ್ನು ಖರೀದಿ ಮಾಡಿ ಮನೆಗೆ ತರುತ್ತಾರೆ. ಗವರಿ ಮನೆಗೆ ಬಂದ ಮೇಲೆ ಮನೆಯಲ್ಲಿನ ಸಣ್ಣಪುಟ್ಟ ಜಗಳ ನಿಂತಿದೆಯಂತೆ, ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆಯಂತೆ. ಹಾಗಾಗಿ ಗೌರಿ ಇವರ ಮನೆಯ ಮಗಳಾಗಿದ್ದಾಳೆ.