ಕಾರ್ಕಳ ಅತಿರಥರ ಅಖಾಡ:ಹಿಂದುತ್ವದ ಚುನಾವಣೆ ಬಗ್ಗೆ ಏನಂತಾರೆ ಕಾರ್ಕಳ ಜನರು..?

2023ರ ಕರ್ನಾಟಕ ಕುರುಕ್ಷೇತ್ರದ ಹೈವೋಲ್ಟೇಜ್‌  ಕಾರ್ಯಕ್ರಮ ಅತಿರಥರ ಅಖಾಡದಲ್ಲಿ ಕಾರ್ಕಳ ಕ್ಷೇತ್ರದ ಗ್ರೌಂಡ್ ರಿಪೋರ್ಟ್‌ ಮಾಡಲಾಗಿದೆ.
 

First Published Mar 10, 2023, 4:02 PM IST | Last Updated Mar 10, 2023, 4:02 PM IST

ಸುನಿಲ್‌ಕುಮಾರ್‌ ವಿರುದ್ದ ಪ್ರಮೋದ್‌ ಮುತಾಲಿಕ್‌ ಕಾರ್ಕಳದಲ್ಲಿ ಸ್ಪರ್ಧಿಸಿದ್ದರಿಂದ ಈ ಕ್ಷೇತ್ರಕ್ಕೆ ಸ್ಟಾರ್‌ ವ್ಯಾಲ್ಯೂ ಬಂದಿದ್ದು, ಇಲ್ಲಿ ಫೈಟ್‌ ನಡೆಯುತ್ತಿರುವುದು ಹಿಂದುತ್ವ VS ಹಿಂದುತ್ವ ವಿಚಿತ್ರವಾದ್ರೂ ಇದು ಸತ್ಯವಾಗಿದೆ. 2004 ರನಂತರ  ಕಾರ್ಕಳ ಹಿಂದುತ್ವದ ಭದ್ರ ಕೋಟೆಯಾಗಿ ಪರಿಚಯವಾಗಿದ್ದು, 2004 ರಲ್ಲಿ ಬಜರಂಗದಳದ ಕಾರ್ಯಕರ್ತನಾಗಿ ಸುನಿಲ್‌ಕುಮಾರ್‌  ಕಾರ್ಕಳ ಕ್ಷೇತ್ರದಲ್ಲಿ ಗೆದ್ದ ನಂತರ 2008 ರಲ್ಲಿ ಸೋತು 2013 ಮತ್ತು 2018ರಲ್ಲಿ ಸತತವಾಗಿ ಗೆದ್ದಿದ್ದಾರೆ .ಈಗ ಗುರುಶಿಷ್ಯರ ಕಾಳಗಕ್ಕೆ ಕಾರ್ಕಳವೇ ವೇದಿಕೆಯಾಗಿದೆ. ಇನ್ನು ಹಿಂದೂ ಫೈರ್ ಬ್ರ್ಯಾಂಡ್ ಮುತಾಲಿಕ್ ಕರಾವಳಿಗೆ ಬಂದಿದ್ದೇಕೆ?ಹಿಂದುತ್ವದ ಚುನಾವಣೆ ಬಗ್ಗೆ ಏನಂತಾರೆ ಕಾರ್ಕಳ ಜನರು..? ಕಾರ್ಕಳದಲ್ಲಿ ಕೇಳ್ತಿರೋದು ಅಭಿವೃದ್ಧಿಯ ಮಂತ್ರವೋ..? ಹಿಂದುತ್ವವೋ..? ಎಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ.