Asianet Suvarna News Asianet Suvarna News

ಗಿರಿನಾಡಲ್ಲಿ ಆಕ್ರೋಶಕ್ಕೆ ಕಾರಣವಾದ ಸಿಎಂ ಮೆಡಿಕಲ್ ಕಾಲೇಜ್ ಹೇಳಿಕೆ!

Jun 29, 2019, 4:48 PM IST

ಯಾದಗಿರಿ(ಜೂ.29): ಯಾದಗರಿ ಮೆಡಿಕಲ್ ಕಾಲೇಜಿನ ಕುರಿತು ಸಿಎಂ ಹೆಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆ ಗಿರಿನಾಡಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಯಾದಗಿರಿಯಲ್ಲಿ ಮೆಡಿಕಲ್ ಕಾಲೇಜು ಕಟ್ಟುವುದರಿಂದ ಪ್ರಯೋಜನವಿಲ್ಲ ಎಂದು ಸಿಎಂ ನುಡಿದಿದ್ದರು. ಇದರಿಂದ ಕೆರಳಿರುವ ಯಾದಗಿರಿ ಜಿಲ್ಲಾ ಜನರು, ಹೈ-ಕ ಭಾಗವೆಂದರೆ ಸಿಎಂ ನಿರ್ಲಕ್ಷ್ಯ ತೋರುತ್ತಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಮಾತನಾಡಿರುವ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ್, ಯಾದಗಿರಿ ಇಡೀ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಅಪಖ್ಯಾತಿಗೆ ಗುರಿಯಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ನಿರ್ಲಕ್ಷ್ಯ ತೋರುವುದು ಸಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ ...