Asianet Suvarna News Asianet Suvarna News

ಯಾವುದೇ ಖಾತೆ ಕೊಟ್ಟರೂ ನಿಷ್ಠೆಯಿಂದ ಒಳ್ಳೆಯ ಕೆಲಸ ಮಾಡ್ತೇನೆ: ಆನಂದ ಸಿಂಗ್‌

ಯಡಿಯೂರಪ್ಪ ಸರ್ಕಾರದ ಸಚಿವ ಸಂಪುಟ ವಿಸ್ತರಣೆ| ನೂತನ ಸಚಿವರಾಗಿ 10 ಶಾಸಕರ ಪ್ರಮಾಣ ವಚನ ಸ್ವೀಕಾರ| ಸುಭದ್ರ ನಡೆಯಲಿ ಎಂಬುದು ನಮ್ಮ ಆಶಯ ಎಂದ ಆನಂದ್‌ ಸಿಂಗ್|

ಬೆಂಗಳೂರು(ಫೆ.06): ಯಡಿಯೂರಪ್ಪ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದೆ. ಇಂದು ನೂತನ ಸಚಿವರಾಗಿ 10 ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ವಿಜಯನಗರ ಶಾಸಕ ಆನಂದ್‌ ಸಿಂಗ್ ಸುಭದ್ರ ನಡೆಯಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಹೇಳಿದ್ದಾರೆ. 

ನಮ್ಮನ್ನ ಸಚಿವರನ್ನಾಗಿ ಮಾಡಿದ ಸಿಎಂಗೆ ಧನ್ಯವಾದ ಹೇಳುತ್ತೇನೆ. ಕೆಲಸ ಮಾಡುವುದಕ್ಕೆ ಯಾವ ಖಾತೆ ಆದರೇನು, ನನಗೆ ಯಾವುದೇ ಖಾತೆ ಕೊಟ್ಟರೂ ನಿಷ್ಠೆಯಿಂದ ಒಳ್ಳೆಯ ಕೆಲಸ ಮಾಡುತ್ತೇನೆ. ನಾನು ಯಾವುದೇ ಖಾತೆಗೂ ಬೇಡಿಕೆ ಇಟ್ಟಿಲ್ಲ ಎಂದು ಹೇಳಿದ್ದಾರೆ.

Video Top Stories