ಲಾಕ್‌ಡೌನ್ ಉಲ್ಲಂಘಿಸಿ ದೇವಳದ ಜಾತ್ರೆ! ಬೆಚ್ಚಿಬಿದ್ದ ಹಾಟ್‌ಸ್ಪಾಟ್ ಜಿಲ್ಲೆ
ಕೊರೋನಾ ಹೆಮ್ಮಾರಿಗೆ ತತ್ತರಿಸಿ ಹೋಗಿರುವ ಕಲಬುರಗಿ ಜಿಲ್ಲೆ
ಪೊಲೀಸರನ್ನು ಯಾಮಾರಿಸಿ ಜಾತ್ರೆ ಹಮ್ಮಿಕೊಂಡ ದೇವಸ್ಥಾನ ಮಂದಿ, 40 ವಿರುದ್ಧ ಎಫ್‌ಐಆರ್
ಕಲಬುರಗಿ (ಏ.16): ಲಾಕ್‌ಡೌನ್ ಉಲ್ಲಂಘಿಸಿ ದೇವಳದ ಜಾತ್ರೆ ಹಮ್ಮಿಕೊಂಡ ಘಟನೆ ಕಲಬುರಗಿಯ ಚಿತ್ತಾಪುರದಲ್ಲಿ ನಡೆದಿದೆ. ಮೊದಲೇ ಕೊರೋನಾ ಹೆಮ್ಮಾರಿಗೆ ತತ್ತರಿಸಿ ಹೋಗಿರುವ ಕಲಬುರಗಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ.
ಇಲ್ಲಿಂದ ಮೂರು ಕಿ.ಮೀ ದೂರದಲ್ಲಿರುವ ವಾಡಿಯಲ್ಲಿ 1 ವರ್ಷದ ಮಗುವಿಗೆ ಕೊರೋನಾ ಬಂದಿದೆ, ಪಟ್ಟಣವನ್ನು ಸೀಲ್ ಡೌನ್ ಮಾಡಲಾಗಿದೆ. ಅದಾಗ್ಯೂ ಪೊಲೀಸರನ್ನು ಯಾಮಾರಿಸಿ ಜಾತ್ರೆ ಹಮ್ಮಿಕೊಂಡ ದೇವಸ್ಥಾನದ ಪದಾಧಿಕಾರಿಗಳು ಸೇರಿದಂತೆ 40 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
"