Asianet Suvarna News Asianet Suvarna News

ಚಿಕ್ಕಮಗಳೂರು : ಸಗೀರ್ ಫಾಲ್ಸ್ ನೋಡಲು ಪ್ರವಾಸಿಗರ ದಂಡು, ಕೋವಿಡ್ ನಿಯಮಕ್ಕೆ ಡೋಂಟ್ ಕೇರ್!

Aug 5, 2021, 3:36 PM IST

ಚಿಕ್ಕಮಗಳೂರು (ಆ. 05): ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಾಣ. ಇಲ್ಲಿನ ಸಗೀರ್ ಫಾಲ್ಸ್ ಸೌಂದರ್ಯವನ್ನು ಸವಿಯಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಆದರೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ನೋ ಮಾಸ್ಕ್, ನೋ ಸಾಮಾಜಿಕ ಅಂತರ..! ಚಿಕ್ಕಮಗಳೂರಿನಲ್ಲಿ ಕೊರೋನಾ ಕೇಸ್‌ಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸದ್ಯ ಚಿಕ್ಕಮಗಳೂರು ಪ್ರವಾಸವನ್ನು ಮುಂದೂಡಿ ಎಂದು ಜಿಲ್ಲಾಡಳಿತ ಮನವಿಯನ್ನೂ ಮಾಡಿದೆ.