Asianet Suvarna News Asianet Suvarna News

ಒಂದೆಡೆ ಕೊರೋನಾ ಕಾಟ.. ಇತ್ತ ಪ್ರಕೃತಿ ಹೊಡೆತ: ಕಂಗಾಲಾದ ರೈತ..!

ಬಿರುಗಾಳಿ ಸಹಿತ ಸುರಿದ ಭಾರೀ ಮಳೆ| ನೆಲಕ್ಕುರುಳಿದ ಮಾವು, ಸಂಕಷ್ಟದಲ್ಲಿ ರೈತ| ಗದಗ ಜಿಲ್ಲೆಯ ಮುಂಡವಾಡದಲ್ಲಿ ನಡೆದ ಘಟನೆ| ಅಕಾಲಿಕವಾಗಿ ಸುರಿದ ಮಳೆಗೆ ಎರಡು ಟನ್‌ನಷ್ಟು ಮಾವು ಬೆಳೆ ಹಾಳು|

ಗದಗ(ಏ.24): ನಿನ್ನೆ(ಗುರುವಾರ) ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಮಾವಿನ ಫಸಲು ಹಾಳಾದ ಘಟನೆ ಜಿಲ್ಲೆಯ ಮುಂಡವಾಡದಲ್ಲಿ ನಡೆದಿದೆ. ಅಕಾಲಿಕವಾಗಿ ಸುರಿದ ಮಳೆಗೆ ಸುಮಾರು ಎರಡು ಟನ್‌ನಷ್ಟು ಮಾವು ಬೆಳೆ ಸಂಪೂರ್ಣವಾಗಿ ನೆಲಕ್ಕುರುಳಿದೆ. ಹೀಗಾಗಿ ರೈತ ಕಂಗಾಲಾಗಿದ್ದಾನೆ. 

ಫ್ರೀ ಹಾಲು ಆಯ್ತು, ಇದೀಗ ಉಚಿತ ಚಿಕನ್‌ಗೆ ಮುಗಿಬಿದ್ದ ಜನ: ಜೀವಕ್ಕಿಂತ ಮಾಂಸವೇ ಮುಖ್ಯವಾಯ್ತಾ?

ಒಂದೆಡೆ ಕೊರೋನಾ ವೈರಸ್‌ನಿಂದ ದೇಶಾದ್ಯಂತ ಲಾಕ್‌ಡೌನ್‌ ಇರುವ ಹಿನ್ನೆಲೆಯಲ್ಲಿ ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗದೆ ರೈತಾಪಿ ವರ್ಗ ಸಂಕಷ್ಟ ಎದುರಿಸುತ್ತಿದೆ. ಇನ್ನೊಂದೆಡೆ ಭಾರೀ ಮಳೆಯಿಂದ ಮಾವು ಬೆಳೆ ಹಾಳಾಗಿರುವುದರಿಂದ ಅನ್ನದಾತ ಸಮಸ್ಯೆಗಳ ಮೇಲೆ ಸಮಸ್ಯೆಗಳನ್ನ ಎದುರಿಸುವಂತಾಗಿದೆ. 
 

Video Top Stories