ಶಾಸಕರಿಂದ ಬೆದರಿಕೆ, FB ಲೈವ್‌ ಮಾಡಿ ಎಪಿಎಂಸಿ ಏಜೆಂಟ್ ಆತ್ಮಹತ್ಯೆ ಯತ್ನ

Accuses MLA for Abetment

First Published Apr 17, 2020, 3:30 PM IST | Last Updated Apr 17, 2020, 3:30 PM IST

ಚಾಮರಾಜನಗರ(ಏ.17): ನಾನು ಸತ್ತರೆ ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಕಾರಣ ಎಂದು ಚಾಮರಾಜನಗರದ ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ದೌರ್ಜನ್ಯ ನಡೆಸಿ 1 ಲಕ್ಷ ರೂಪಾಯಿ ಕಸಿದುಕೊಂಡಿರುವುದಾಗಿ ಯುವಕ ಆರೋಪಿಸಿದ್ದಾರೆ.

ಫೇಸ್‌ಬುಕ್ ಲೈವ್ ಮಾಡಿ ಎಪಿಎಂಪಿ ಏಜೆಂಟ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಶಿವಮೂರ್ತಿ ಮೈಸೂರಿನ ಕೆ. ಆರ್. ಪೇಟೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಲಾಕ್‌ಡೌನ್‌ ಅವಧಿಯ ರದ್ದಾದ ವಿಮಾನ ಟಿಕೆಟ್‌ ಮೊತ್ತ ವಾಪಾಸ್

ಶಾಸಕ ಪೊಲೀಸರ ಮೇಲೆ ಒತ್ತಡ ಹೇರಿ ಶಿವಮೂರ್ತಿಯನ್ನು ವಶಕ್ಕೆ ಪಡೆಯುವಂತೆ ಹೇಳಿದ್ದಾರೆ ಎನ್ನಲಾಗಿದೆ. ತನ್ನ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಯುವಕ ಫೇಸ್‌ಬುಕ್ ಲೈವ್ ವಿಡಿಯೋ ಮಾಡಿದ್ದು ಆತ್ಹಮಹತ್ಯೆಗೆ ಯತ್ನಿಸಿದ್ದಾನೆ. ಇಲ್ಲಿದೆ ವಿಡಿಯೋ

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]

Video Top Stories