Asianet Suvarna News Asianet Suvarna News

ರೀಲ್ಸ್ ಮಾಡಲು ಹೋಗಿ ಬೈಕ್‌ನಿಂದ ಬಿದ್ದ ಯುವಕ: ಅಪಘಾತದಲ್ಲಿ ಗಂಭೀರ ಗಾಯ

ಬೈಕ್‌ ಸ್ಟಂಟ್ ಮಾಡಲು ಹೋಗಿ ಯುವಕನಿಗೆ ಗಂಭೀರ ಗಾಯವಾದ ಘಟನೆ ಧಾರವಾಡದಲ್ಲಿ ನಡೆದಿದೆ. ಗದಗ ಜಿಲ್ಲೆಯ ನರಗುಂದ ಪಟ್ಟಣದ ನಿವಾಸಿ ಸಮೀರ್‌ಗೆ ಗಂಭೀರ ಗಾಯವಾಗಿದ್ದು, ಧಾರವಾಡ ಜಿಲ್ಲೆಯ ಅಣ್ಣಿಗೇರಿ ರಸ್ತೆಯಲ್ಲಿ ಸಮೀರ್ ರೀಲ್ಸ್ ಮಾಡುತ್ತಿದ್ದ. 

ಧಾರವಾಡ (ಜು.29): ಬೈಕ್‌ ಸ್ಟಂಟ್ ಮಾಡಲು ಹೋಗಿ ಯುವಕನಿಗೆ ಗಂಭೀರ ಗಾಯವಾದ ಘಟನೆ ಧಾರವಾಡದಲ್ಲಿ ನಡೆದಿದೆ. ಗದಗ ಜಿಲ್ಲೆಯ ನರಗುಂದ ಪಟ್ಟಣದ ನಿವಾಸಿ ಸಮೀರ್‌ಗೆ ಗಂಭೀರ ಗಾಯವಾಗಿದ್ದು, ಧಾರವಾಡ ಜಿಲ್ಲೆಯ ಅಣ್ಣಿಗೇರಿ ರಸ್ತೆಯಲ್ಲಿ ಸಮೀರ್ ರೀಲ್ಸ್ ಮಾಡುತ್ತಿದ್ದ. ಬೈಕ್ ಮೇಲೆ ನಿಂತು ರೀಲ್ಸ್ ಮಾಡುತ್ತಿದ್ದಾಗ ಆಯ ತಪ್ಪಿ ಬಿದ್ದು ಗಾಯವಾಗಿದ್ದು, ಸದ್ಯ ಹುಬ್ಬಳ್ಳಿಯಲ್ಲಿ ಕಿಮ್ಸ್ ಆಸ್ಪತ್ರೆಯಲ್ಲಿ ಗಾಯಗೊಂಡ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.