Asianet Suvarna News Asianet Suvarna News

ಕೈಯಲ್ಲಿ ಜೀವಂತ ಹಾವು ಹಿಡಿದು ತಿರುಗಾಡಿದ ಭೂಪ: ಹೌಹಾರಿದ ಜನತೆ!

ವ್ಯಕ್ತಿಯೊಬ್ಬ ಕೈಯಲ್ಲಿ ಜೀವಂತ ಹಾವು ಹಿಡಿದುಕೊಂಡು ತಿರುಗಾಡಿದ ವ್ಯಕ್ತಿ| ಧಾರವಾಡದ ತೇಜಸ್ವಿನಿ ಬ್ರಿಡ್ ಬಳಿ ನಡೆದ ಘಟನೆ| ವ್ಯಕ್ತಿಯ ಕೈಯಲ್ಲಿನ ಹಾವು ಕಂಡು ತಬ್ಬಿಬ್ಬಾದ ಜನತೆ| 

ಧಾರವಾಡ(ಜ.27): ವ್ಯಕ್ತಿಯೊಬ್ಬ ಕೈಯಲ್ಲಿ ಜೀವಂತ ಹಾವು ಹಿಡಿದುಕೊಂಡು ಓಡಾಡಿದ ಘಟನೆ ಧಾರವಾಡ ನಗರದಲ್ಲಿ ಇಂದು ನಡೆದಿದೆ. ಹಾವು ಹಿಡಿದುಕೊಂಡು ತಿರುಗಾಡಿದ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ. ನಗರದ ತೇಜಸ್ವಿನಿ ಬ್ರಿಡ್ಜ್‌ ಬಳಿ ಈ ವ್ಯಕ್ತಿ ಕೈಯಲ್ಲಿ ಹಾವು ಹಿಡಿದು ಜನರಿಗೆ ಅಚ್ಚರಿ ಮೂಡಿಸಿದ್ದಾನೆ. 

ವ್ಯಕ್ತಿಯ ಕೈಯಲ್ಲಿನ ಹಾವು ಕಂಡ ಜನತೆ ಕೆಲ ಕ್ಷಣ ತಬ್ಬಿಬ್ಬಾಗಿದ್ದಾರೆ. ಸ್ಥಳದಲ್ಲಿದ್ದ ಮಕ್ಕಳು ಹಾವು ಹಿಡಿದ ವ್ಯಕ್ತಿಯನ್ನ ಹಿಂಬಾಲಿಸಿದ್ದಾರೆ. ಕೊನೆಗೆ ಈ ಭೂಪ ಕೈಯಲ್ಲಿ ಹಾವು ಹಿಡಿದು ಸಾರಾಯಿ ಅಂಗಡಿಗೆ ಹೋಗಿದ್ದಾನೆ. ಕೈಯಲ್ಲಿ ಹಾವು ಹಿಡಿದಿದ್ದನ್ನ ಕಂಡ ಜನ ತಬ್ಬಿಬ್ಬಾಗಿದ್ದು ಮಾತ್ರ ಸುಳ್ಳಲ್ಲ

Video Top Stories