ಬೆಳಗಾವಿ: ಮೂಡಲಗಿ ಹಳ್ಳದಲ್ಲಿ 7 ಭ್ರೂಣಲಿಂಗ ಪತ್ತೆ: ತಪ್ಪೊಪ್ಪಿಕೊಂಡ ವೈದ್ಯೆ

ಮೂಡಲಗಿ ಪಟ್ಟಣದ ಹಳ್ಳದಲ್ಲಿ ಡಬ್ಬಗಳಲ್ಲಿ ತುಂಬಿ ಎಸೆಯಲಾದ ಏಳು ಭ್ರೂಣಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಅಕ್ರಮವಾಗಿ ಗರ್ಭದಲ್ಲಿನ ಭ್ರೂಣದ ಲಿಂಗ ಪತ್ತೆ ಮಾಡಿ ನಂತರ ಅದನ್ನು ಹತ್ಯೆ ಮಾಡಿ ಈ ರೀತಿ ಎಸೆದಿರುವ ಶಂಕೆ ಇದೆ. 

First Published Jun 25, 2022, 3:31 PM IST | Last Updated Jun 25, 2022, 3:37 PM IST

ಬೆಳಗಾವಿ (ಜೂ. 25): ಮೂಡಲಗಿ (Mudalagi ) ಪಟ್ಟಣದ ಹಳ್ಳದಲ್ಲಿ ಡಬ್ಬಗಳಲ್ಲಿ ತುಂಬಿ ಎಸೆಯಲಾದ ಏಳು ಭ್ರೂಣಗಳು (Embryonic)  ಪತ್ತೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಅಕ್ರಮವಾಗಿ ಗರ್ಭದಲ್ಲಿನ ಭ್ರೂಣದ ಲಿಂಗ ಪತ್ತೆ ಮಾಡಿ ನಂತರ ಅದನ್ನು ಹತ್ಯೆ ಮಾಡಿ ಈ ರೀತಿ ಎಸೆದಿರುವ ಶಂಕೆ ಇದೆ. ಈ ಸಂಬಂಧ ಆರೋಗ್ಯ ಹಾಗೂ ಪೊಲೀಸ್‌ ಇಲಾಖೆ ತನಿಖೆಗೆ ಮುಂದಾಗಿವೆ. 

Belagavi: ಮೂಡಲಗಿ ಬಳಿ ಹಳ್ಳದಲ್ಲಿ 7 ಭ್ರೂಣಲಿಂಗ ಪತ್ತೆ

ಸ್ಕಾನಿಂಗ್ ಸೆಂಟರ್, ಆಸ್ಪತ್ರೆಗಳ  ಮೇಲೆ DHO ಡಾ. ಮಹೇಶ್ ಕೋಣಿ ನೇತೃತ್ವದಲ್ಲಿ  ದಾಳಿ ನಡೆಸಲಾಗಿದೆ. ಭ್ರೂಣವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. 7 ಭ್ರೂಣಗಳು ನಮ್ಮ ಆಸ್ಪತ್ರೆಯದ್ದೇ ಎಂದು ವೈದ್ಯೆ ವೀಣಾ ತಪ್ಪೊಪ್ಪಿಕೊಂಡಿದ್ಧಾರೆ. ಮೆಟರ್ನಿಟಿ ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರನ್ನು ಸೀಜ್ ಮಾಡಲಾಗಿದೆ.