ಕಟ್ಟಡ ನಿರ್ಮಾಣದ ಕೆಲಸಕ್ಕೆ ಬಂದಿದ್ದ 45 ಜೀತದಾಳುಗಳ ರಕ್ಷಣೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರ ಸಮೀಪದ ಇರುವಕ್ಕಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ವಿವಿ ಕಟ್ಟಡ ನಿರ್ಮಾಣದ ಕೆಲಸಕ್ಕೆ ಬಂದಿದ್ದ ಗುತ್ತಿಗೆ ಆಧಾರದ 45 ಕಾರ್ಮಿಕರನ್ನು ಸಾಗರ  ಉಪವಿಭಾಗಾಧಿಕಾರಿ ವಿ.ಪ್ರಸನ್ನ ನೇತೃತ್ವದ ತಂಡ ಬಿಡುಗಡೆಗೊಳಿಸಿದೆ. 

First Published Dec 18, 2020, 5:50 PM IST | Last Updated Dec 18, 2020, 5:51 PM IST

ಶಿವಮೊಗ್ಗ (ಡಿ. 18):  ಸಾಗರ ತಾಲೂಕಿನ ಆನಂದಪುರ ಸಮೀಪದ ಇರುವಕ್ಕಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ವಿವಿ ಕಟ್ಟಡ ನಿರ್ಮಾಣದ ಕೆಲಸಕ್ಕೆ ಬಂದಿದ್ದ ಗುತ್ತಿಗೆ ಆಧಾರದ 45 ಕಾರ್ಮಿಕರನ್ನು ಸಾಗರ  ಉಪವಿಭಾಗಾಧಿಕಾರಿ ವಿ.ಪ್ರಸನ್ನ ನೇತೃತ್ವದ ತಂಡ ಬಿಡುಗಡೆಗೊಳಿಸಿದೆ. 

ರೈತರ ತೋಟಗಳಿಗೆ ನುಗ್ಗಿದ ಕಾಡಾನೆಗಳು; ಓಡಿಸಲು ಅಧಿಕಾರಿಗಳ ಹರಸಾಹಸ

ಕ್ಯಾಂಪಸ್‌ನಲ್ಲಿ ದುಡಿಯುತ್ತಿದ್ದ ಕಾರ್ಮಿಕರ ಪೈಕಿ ಜೀತದಾಳುಗಳಿಲ್ಲ ಎಂದು ಕಾಮಗಾರಿ ಮುಖ್ಯಸ್ಥರು  ಹಾರಿಕೆಯ ಉತ್ತರ ಕೊಟ್ಟಿದ್ದರು.  ನಂತರ ಕಾರ್ಮಿಕರ ಶೆಡ್ ಪರಿಶೀಲಿಸಿದಾಗ ಅಲ್ಲಿ 12 ಪುರುಷರು , 17 ಮಹಿಳೆಯರು ಮತ್ತು 16 ಮಕ್ಕಳು ಸೇರಿ 45  ಮಂದಿ ಇದ್ದಿದ್ದರು. ಒಂದು ಕುಟುಂಬಕ್ಕೆ ತಲಾ 50 ಸಾವಿರ ದಿಂದ ಒಂದು ಲಕ್ಷ ರೂ . ಮುಂಗಡ ನೀಡಿದ್ದರು.  ಪ್ರತಿ ತಿಂಗಳು ಕಾರ್ಮಿಕರಿಗೆ 5,500 ಸಂಬಳ ನಿಗದಿ ಮಾಡಲಾಗಿತ್ತು. ಮೂರು ವರ್ಷಗಳಿಂದ ಊರಿಗೆ ಹೋಗಲು ಬಿಟ್ಟಿಲ್ಲ, ನಮ್ಮನ್ನು ಕಳುಹಿಸಿ ಕೊಡಿ  ಎಂದು ಕಾರ್ಮಿಕರು ಕೇಳಿಕೊಂಡಿದ್ದಾರೆ.