Asianet Suvarna News Asianet Suvarna News

ಬೆಂಗಳೂರಿನಲ್ಲಿ 14 ಅಡಿ ಎತ್ತರದ ಮೋದಿ ಪ್ರತಿಮೆ.. ವಿಶೇಷ ಒಂದೆರಡಲ್ಲ!

* ಬೆಂಗಳೂರು ನಗರಕ್ಕೆ ಬರಲಿದೆ ವೈಶಿಷ್ಟ್ಯ ಪೂರ್ಣ 14 ಅಡಿ ಎತ್ತರದ ಮೋದಿ ಪ್ರತಿಮೆ

* ಮರುಬಳಕೆ ವಸ್ತುಗಳನ್ನೇ ಬಳಸಿ ಪ್ರಧಾನಿ ಮೋದಿ ಪ್ರತಿಮೆವ ನಿರ್ಮಾಣ

*  14 ಅಡಿ ಎತ್ತರದ ವಿಶೇಷವಾದ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ

*  ಬಿಜೆಪಿ ಮಾಜಿ  ಕಾರ್ಪೊರೇಟರ್ ಮೋಹನ್ ರಾಜು ಅವರಿಂದ ಈ ವಿಶೇಷ ಪ್ರತಿಮೆ ನಿರ್ಮಾಣ

ಬೆಂಗಳೂರು(ಸೆ. 15)  ನಗರಕ್ಕೆ ವೈಶಿಷ್ಟ್ಯ ಪೂರ್ಣ 14 ಅಡಿ ಎತ್ತರದ ಮೋದಿ ಪ್ರತಿಮೆ ಬರಲಿದೆ.  ಮರುಬಳಕೆ ವಸ್ತುಗಳನ್ನೇ ಬಳಸಿ ಪ್ರಧಾನಿ ಮೋದಿ ಪ್ರತಿಮೆವ ನಿರ್ಮಾಣ ಮಾಡಲಾಗಿದೆ  14 ಅಡಿ ಎತ್ತರದ ವಿಶೇಷವಾದ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ ಎಲ್ಲರ ಗಮನ ಸೆಳೆಯಲಿದೆ.

 ಬಿಜೆಪಿ ಮಾಜಿ  ಕಾರ್ಪೊರೇಟರ್ ಮೋಹನ್ ರಾಜು ಈ ವಿಶೇಷ ಪ್ರತಿಮೆ ನಿರ್ಮಾಣದ ಹಿಂದಿನ ಶಕ್ತಿ.  ಭಾನುವಾರದೊಳಗೆ ನಗರಕ್ಕೆ ಬರಲಿರುವ ಪ್ರತಿಮೆಯನ್ನು  ಸೆಪ್ಟೆಂಬರ್ 17  ಶುಕ್ರವಾರದಂದು ಪ್ರಧಾನಿ ಅವರ  ಹುಟ್ಟುಹಬ್ಬದ ಸಂದರ್ಭ ಅನಾವರಣ ಮಾಡಲಾಗುವುದು.  ನಗರದ ಬೊಮ್ಮನಹಳ್ಳಿ ವಾರ್ಡ್  ಉದ್ಯಾನವೊಂದರಲ್ಲಿ ಪ್ರತಿಷ್ಠಾಪನೆ ಮಾಡಲು ಸಿದ್ಧತೆಯಾಗಿದೆ.

ಬಂಗಾರದ ಮನುಷ್ಯ ಉದ್ಯಾನ ಉದ್ಘಾಟನೆ.. ಹೇಗಿದೆ ನೋಟ?

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಅಪ್ಪ-ಮಗ ಸೇರಿ ಪ್ರತಿಮೆ ನಿರ್ಮಿಸಿದ್ದಾರೆ.  ಗುಜರಿ ವಸ್ತುಗಳನ್ನು ಬಳಸಿ, ಎರಡು ತಿಂಗಳ ಕಾಲದಲ್ಲಿ ಪ್ರಧಾನಿ ಅವರ ಪ್ರತಿಮೆ ನಿರ್ಮಿಸಿದ್ದಾರೆ  ಸುಮಾರು 2 ಟನ್ ಆಟೋಮೊಬೈಲ್ ಸ್ಕ್ಯ್ರಾಪ್ ಇದಕ್ಕೆ ಬಳಸಲಾಗಿದೆ. ಆಂಧ್ರದ ತೆನಾಲಿಯ ಕೆ.ವೆಂಕಟೇಶ್ವರ ರಾವ್ ಹಾಗೂ ಅವರ ಮಗ ರವಿಚಂದ್ರ ಈ ಪ್ರತಿಮೆ ನಿರ್ಮಿಸಿದ್ದಾರೆ. ಈ ಪ್ರತಿಮೆಗಾಗಿ, ಹೈದರಾಬಾದ್, ವಿಶಾಖಪಟ್ಟಣಂ, ಚೆನ್ನೈ, ಗುಂಟೂರಿನಿಂದ ಆಟೋಮೊಬೈಲ್ ತ್ಯಾಜ್ಯಗಳನ್ನು ಸಂಗ್ರಹಿಸಿ ತರಲಾಗಿತ್ತು. ಬೈಕ್ ಚೈನ್, ಗೇರ್ ವೀಲ್, ಕಬ್ಬಿಣದ ರಾಡುಗಳು, ಸ್ಕ್ರೂ, ನಟ್, ಬೋಲ್ಟ್‌ಗಳನ್ನು ಬಳಸಿ ಪ್ರತಿಮೆ ನಿರ್ಮಿಸಲಾಗಿದ್ದು ಆಕರ್ಷಕವಾಗಿದೆ.

Video Top Stories