Asianet Suvarna News Asianet Suvarna News

ಬಾಗಲಕೋಟೆಗೆ ಬಡಿದ ಕೊರೋನಾ ಬರಸಿಡಿಲು: ಒಂದೇ ದಿನ 13 ಮಂದಿಗೆ ಸೋಂಕು..!

ಬಾಗಲಕೋಟೆ ಜಿಲ್ಲೆಯಲ್ಲಿ ಒಂದೇ ದಿನ 13 ಮಂದಿಗೆ ಕೊರೋನಾ| ಬೆಚ್ಚಿ ಬಿದ್ದ ಜಿಲ್ಲೆಯ ಜನತೆ|ಬಾದಾಮಿ ತಾಲೂಕಿನ ಡಾನಕಶಿರೂರು ಗ್ರಾಮದ ಗರ್ಭಿಣಿಯಿಂದ ಒಟ್ಟು 12 ಜನರಿಗೆ ಕೊರೋನಾ ಸೋಂಕು|

ಬಾಗಲಕೋಟೆ(ಮೇ.06):  ಇಂದು(ಬುಧವಾರ) ಒಂದೇ ದಿನ ಜಿಲ್ಲೆಯಲ್ಲಿ 13 ಮಂದಿಗೆ ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಜಿಲ್ಲಾದ್ಯಂತ ಭಯದ ವಾತಾವರಣ ನಿರ್ಮಾಣವಾಗಿದೆ. ಜಿಲ್ಲೆಯ ಬಾದಾಮಿ ತಾಲೂಕಿನ ಡಾನಕಶಿರೂರು ಗ್ರಾಮದ ಗರ್ಭಿಣಿಯಿಂದ ಒಟ್ಟು 12 ಜನರಿಗೆ ಕೊರೋನಾ ಸೋಂಕು ತಗುಲಿದೆ. 

ಗರ್ಭಿಣಿಗೆ ಕೊರೋನಾ ಸೋಂಕು ದೃಢ: BTM ಲೇಔಟ್‌ನ ಇಕೋಬಾ ನಗರ ಸೀಲ್‌ಡೌನ್‌

ಜಿಲ್ಲೆಯಲ್ಲಿ ಇಂದು ಒಂದೇ ದಿನ ಬರೋಬ್ಬರಿ 13 ಮಂದಿಗೆ ಕೊರೋನಾ ಬಂದಿದೆ. ಡಾನಕಶಿರೂರು ಗ್ರಾಮದ 12 ಮಂದಿಗೆ ಕೋವಿಡ್‌ ವೈರಸ್‌ ತಗುಲಿದೆ. ಹೀಗಾಗಿ ಇಡೀ ಗ್ರಾಮ ಹಾಗೂ ಜಿಲ್ಲೆಯ ಜನರಿಗೆ ಆತಂಕ ಶುರುವಾಗಿದೆ. 
 

Video Top Stories