Asianet Suvarna News Asianet Suvarna News

ಐಪಿಎಲ್‌ನಲ್ಲಿ ಸೂಪರ್ ಕಮ್‌ಬ್ಯಾಕ್ ಮಾಡ್ತಾವಾ ಈ 3 ತಂಡಗಳು..?

ಈ ಹಿಂದಿನ ಕೆಲವು ಆವೃತ್ತಿಗಳಲ್ಲೂ ಹೀಗೇ ಆಗಿದೆ, ಮೊದಲಾರ್ಧದಲ್ಲಿ ಹಿನ್ನಡೆ ಅನುಭವಿಸಿದ್ದ ತಂಡಗಳು ಆ ಬಳಿಕ ದ್ವಿತಿಯಾರ್ಧದಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿ ಇತಿಹಾಸ ನಿರ್ಮಿಸಿದ್ದಕ್ಕೆ ಕ್ರಿಕೆಟ್ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.
 

ಅಬುಧಾಬಿ(ಅ.16): 13ನೇ ಆವೃತ್ತಿಯ ಐಪಿಎಲ್ ಮಿಡ್ ಸೀಸನ್ ಮುಕ್ತಾಯವಾಗಿದೆ. ಈಗಾಗಲೇ ಪ್ಲೇ ಆಫ್ ಪ್ರವೇಶಕ್ಕಾಗಿ ಎಲ್ಲಾ 8 ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿವೆ. ಕೆಲವು ತಂಡಗಳು ಮೊದಲಾರ್ಧದಲ್ಲಿ ಅದ್ಭುತ ಪ್ರದರ್ಶನ ತೋರಿದ್ದರೆ, ಮತ್ತೆ ಕೆಲವು ತಂಡಗಳು ದ್ವಿತಿಯಾರ್ಧದಲ್ಲಿ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿವೆ.

ಹೌದು, ಈ ಹಿಂದಿನ ಕೆಲವು ಆವೃತ್ತಿಗಳಲ್ಲೂ ಹೀಗೇ ಆಗಿದೆ, ಮೊದಲಾರ್ಧದಲ್ಲಿ ಹಿನ್ನಡೆ ಅನುಭವಿಸಿದ್ದ ತಂಡಗಳು ಆ ಬಳಿಕ ದ್ವಿತಿಯಾರ್ಧದಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿ ಇತಿಹಾಸ ನಿರ್ಮಿಸಿದ್ದಕ್ಕೆ ಕ್ರಿಕೆಟ್ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.

ಮುಂಬೈ ವಿರುದ್ಧ ಹಳೆ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಕೆಕೆಆರ್..?

ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮೊದಲಾರ್ಧದಲ್ಲಿ ಮುಗ್ಗರಿಸಿ ಆ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಿದ್ದನ್ನು ಕಂಡಿದ್ದೇವೆ. ಇದೇ ಅಂಶದಿಂದ ಸ್ಪೂರ್ತಿ ಪಡೆದು 13ನೇ ಆವೃತ್ತಿಯಲ್ಲಿ ಕಮ್‌ಬ್ಯಾಕ್ ಮಾಡಲು ಈ ಮೂರು ತಂಡಗಳು ಎದುರು ನೋಡುತ್ತಿವೆ.
 

Video Top Stories