Asianet Suvarna News Asianet Suvarna News

ಐಪಿಎಲ್ ಟೂರ್ನಿಯಿಂದ ಹೊರಬಿದ್ದ ಇಬ್ಬರು ಭಾರತೀಯ ಸ್ಟಾರ್ ಕ್ರಿಕೆಟಿಗರು..!

ಕೆಲವು ತಂಡಗಳು ಮತ್ತೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಹೌದು, 8 ಫ್ರಾಂಚೈಸಿಗಳ ಪೈಕಿ ಕೆಲವು ಫ್ರಾಂಚೈಸಿಗಳು ತಮ್ಮ ತಂಡದ ಆಟಗಾರರು ಗಾಯಕ್ಕೆ ತುತ್ತಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ದುಬೈ(ಅ.06): 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗಿ ಸರಿಸುಮಾರು ಎರಡು ವಾರಗಳೇ ಕಳೆದಿವೆ. ಅರಬ್ಬರ ನಾಡಿನಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದ್ದರೆ, ಮತ್ತೆ ಕೆಲವು ತಂಡಗಳು ಲಯ ಕಂಡುಕೊಳ್ಳಲು ಪರದಾಡುತ್ತಿವೆ.

ಇವೆಲ್ಲದರ ಹೊರತಾಗಿ ಕೆಲವು ತಂಡಗಳು ಮತ್ತೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಹೌದು, 8 ಫ್ರಾಂಚೈಸಿಗಳ ಪೈಕಿ ಕೆಲವು ಫ್ರಾಂಚೈಸಿಗಳು ತಮ್ಮ ತಂಡದ ಆಟಗಾರರು ಗಾಯಕ್ಕೆ ತುತ್ತಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

 ಐಪಿಎಲ್ 2020: ಕಗಿಸೋ ರಬಾಡ ದಾಳಿಗೆ ನೆಲಕಚ್ಚಿದ RCB

ಐಪಿಎಲ್‌ನಲ್ಲಿ ಅತ್ಯಂತ ಅನುಭವಿ ಹಾಗೂ ಉಪಯುಕ್ತ ಬೌಲರ್ ಎನಿಸಿಕೊಂಡಿದ್ದ ಭುವನೇಶ್ವರ್ ಕುಮಾರ್ ಹಾಗೂ ಅಮಿತ್ ಮಿಶ್ರಾ ಇದೀಗ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Video Top Stories