Asianet Suvarna News Asianet Suvarna News

ಅಬ್ಬಬ್ಬಾ..! ಸೂಪರ್ ಸಂಡೇ 2 ಪಂದ್ಯದ 3 ಸೂಪರ್ ಓವರ್ ಹೇಗಿದ್ವು..?

ಸೂಪರ್ ಸಂಡೇಯ ಮೊದಲ ಪಂದ್ಯವಾದ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ ನೈಟ್‌ ರೈಡರ್ಸ್ ನಡುವಿನ ಪಂದ್ಯ ಟೈನಲ್ಲಿ ಅಂತ್ಯವಾಯಿತು. ಬಳಿಕ ಸೂಪರ್ ಓವರ್‌ನಲ್ಲಿ ಲೂಕಿ ಫರ್ಗ್ಯೂಸನ್ ಮಾರಕ ದಾಳಿ ನಡೆಸುವ ಮೂಲಕ ಕೆಕೆಆರ್ ತಂಡಕ್ಕೆ ಭರ್ಜರಿ ಗೆಲುವು ತಂದಿತ್ತರು.

ಬೆಂಗಳೂರು(ಅ.19): ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ರೋಚಕ ಹಾಗೂ ಅವಿಸ್ಮರಣೀಯ ಪಂದ್ಯಾವಳಿಗೆ ಸೂಪರ್ ಸಂಡೇಯ ಎರಡು ಪಂದ್ಯಾವಳಿಗಳು ಸಾಕ್ಷಿಯಾಗಿದ್ದು, ಎರಡು ಪಂದ್ಯಗಳ ಫಲಿತಾಂಶಕ್ಕೆ 3 ಸೂಪರ್ ಓವರ್ ನಡೆದು ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಕ್ಕಿತು. 

ಹೌದು, ಸೂಪರ್ ಸಂಡೇಯ ಮೊದಲ ಪಂದ್ಯವಾದ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ ನೈಟ್‌ ರೈಡರ್ಸ್ ನಡುವಿನ ಪಂದ್ಯ ಟೈನಲ್ಲಿ ಅಂತ್ಯವಾಯಿತು. ಬಳಿಕ ಸೂಪರ್ ಓವರ್‌ನಲ್ಲಿ ಲೂಕಿ ಫರ್ಗ್ಯೂಸನ್ ಮಾರಕ ದಾಳಿ ನಡೆಸುವ ಮೂಲಕ ಕೆಕೆಆರ್ ತಂಡಕ್ಕೆ ಭರ್ಜರಿ ಗೆಲುವು ತಂದಿತ್ತರು.

2ನೇ ಸೂಪರ್‌ ಓವರ್‌ನಲ್ಲಿ ರಾಹುಲ್-ಪೂರನ್ ಏಕೆ ಬರಲಿಲ್ಲ..? ಹೊಸ ರೂಲ್ಸ್‌ ನಿಮಗೆ ಗೊತ್ತಾ..?

ಇನ್ನು ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದ ಪಲಿತಾಂಶಕ್ಕಾಗಿ 2 ಸೂಪರ್ ಓವರ್ ನಡೆದು, 2ನೇ ಸೂಪರ್ ಓವರ್‌ನಲ್ಲಿ ಪಂಜಾಬ್ ತಂಡ ಗೆಲುವಿನ ನಗೆ ಬೀರಿದವು. ಈ ಎರಡು ಪಂದ್ಯಗಳು ಹೇಗಿದ್ದವು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.
 

Video Top Stories