Asianet Suvarna News Asianet Suvarna News

IPL 2020: ಸನ್‌ರೈಸರ್ಸ್ ಗೆಲುವಿನ ಹೀರೋ ಪಾಂಡೆ, ಹೋಲ್ಡರ್..!

ಕೆಕೆಆರ್ ವಿರುದ್ಧ ಆಘಾತಕಾರಿ ಸೋಲು ಕಂಡಿದ್ದ ಹೈದರಾಬಾದ್ ತಂಡ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಕೆಲವೊಂದು ಬದಲಾವಣೆ ಮಾಡಿಕೊಂಡಿಕೊಂಡು ಕಣಕ್ಕಿಳಿದಿತ್ತು. ಈ ಪೈಕಿ ಜೇಸನ್ ಹೋಲ್ಡರ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಿದ್ದು ಹೈದರಾಬಾದ್‌ಗೆ ಕೈ ಹಿಡಿಯಿತು.

Oct 23, 2020, 3:03 PM IST

ಬೆಂಗಳೂರು(ಅ.23): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಪ್ಲೇ ಆಫ್ ರೇಸ್‌ ಮತ್ತಷ್ಟು ಚುರುಕಾಗಿದ್ದು, ರಾಜಸ್ಥಾನ ರಾಯಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ ತಂಡ ಭರ್ಜರಿ ಜಯ ದಾಖಲಿಸಿದೆ. ಗೆಲುವಿನೊಂದಿಗೆ ಹೈದರಾಬಾದ್ ತಂಡ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ಹೌದು, ಕೆಕೆಆರ್ ವಿರುದ್ಧ ಆಘಾತಕಾರಿ ಸೋಲು ಕಂಡಿದ್ದ ಹೈದರಾಬಾದ್ ತಂಡ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಕೆಲವೊಂದು ಬದಲಾವಣೆ ಮಾಡಿಕೊಂಡಿಕೊಂಡು ಕಣಕ್ಕಿಳಿದಿತ್ತು. ಈ ಪೈಕಿ ಜೇಸನ್ ಹೋಲ್ಡರ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಿದ್ದು ಹೈದರಾಬಾದ್‌ಗೆ ಕೈ ಹಿಡಿಯಿತು.

ಅನುಮಾನವೇ ಬೇಡ: ಮುಂಬೈ ಇಂಡಿಯನ್ಸ್ ವಿರುದ್ಧ ಸೋತರೂ ಚೆನ್ನೈ ಸೂಪರ್‌ ಕಿಂಗ್ಸ್‌ಗಿದೆ ಪ್ಲೇ ಆಫ್‌ಗೇರುವ ಅವಕಾಶ..!

ಇನ್ನು ಬ್ಯಾಟಿಂಗ್‌ನಲ್ಲಿ ಹೈದರಾಬಾದ್ ತಂಡಕ್ಕೆ ಮನೀಶ್ ಪಾಂಡೆ ಹಾಗೂ ವಿಜಯ್ ಶಂಕರ್ ಅಜೇಯ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಸ್ಮರಣೀಯ ಗೆಲುವನ್ನು ತಂದು ಕೊಟ್ಟಿತು. ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರದರ್ಶನ ಹೇಗಿತ್ತು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.