Asianet Suvarna News Asianet Suvarna News

ಜೈಕೋವ್-ಡಿ ವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ; ಭಾರತೀಯ ವಿಜ್ಞಾನಿಗಳಿಗೆ ಮೋದಿ ಮೆಚ್ಚುಗೆ!

Aug 20, 2021, 6:34 PM IST

ಭಾರತದಲ್ಲಿ ಮತ್ತೊಂದು ಕೊರೋನಾ ಲಸಿಕೆ ಬಳಕೆಗೆ ಅನುಮತಿ ಸಿಕ್ಕಿದೆ. ಝೈಡಸ್ ಸಂಸ್ಥೆಯ ಜೈಕೋವ್ ಡಿ ಕೊರೋನಾ ಲಸಿಕೆ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. 3 ಡೋಸ್ ಲಸಿಕೆ ಇದಾಗಿದ್ದು, ಭಾರತದಲ್ಲಿ ತುರ್ತು ಬಳಕೆಗೆ ಭಾರತದ ಡ್ರಗ್ಸ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ.

ಕೋವಿಡ್ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಿದ ಭಾರತದ ವಿಜ್ಞಾನಿಗಳ ಶ್ರಮ ಹಾಗೂ ನಡೆಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ ಕೊರೋನಾ ವಿರುದ್ಧ ಶಕ್ತವಾಗಿ ಹೋರಾಡುತ್ತಿದೆ. ಇದೀಗ ಜೈಕೋವ್ ಡಿ ಲಸಿಕೆ ಬಳಕಗೆ ಅನುಮತಿ ನೀಡಲಾಗಿದೆ. ಇಧರ ಹಿಂದಿನ ರೂವಾರಿಗಳಾದ ಭಾರತೀಯ ವಿಜ್ಞಾನಿಗಳ ಶ್ರಮ ಶ್ಲಾಘಿಸಲೇಬೇಕು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

Video Top Stories