Narendra Modi: 3ನೇ ಸಲವೂ ಮುಂದುವರೆಯುತ್ತಾ ಮೋದಿ ಸರ್ಕಾರ..? ಎದುರಾಳಿ ಪಡೆಗಳಿಗೆ ಶಾಕ್ ನೀಡಿದ್ದೇಕೆ ಆ ಸಂಗತಿ?
ಮತ್ತೊಂದು ಸರ್ವೆ.. ಮತ್ತೊಂದು ರಹಸ್ಯ ಬಯಲು!
ಮತ್ತೆ ಗದ್ದುಗೆ ಹತ್ತಿ ಕೂರ್ತಾರಾ ಪ್ರಧಾನಿ ಮೋದಿ..?
ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಾ ಮೋದಿ ಸರ್ಕಾರ..?
ಲೋಕಸಭಾ ಚುನಾವಣಾ ಮಹಾಸಂಗ್ರಾಮ. ಅದೆಷ್ಟು ದಾಖಲೆಗಳಿಗೆ ಜನ್ಮನೀಡಲಿದೆಯೋ, ಅದೆಷ್ಟು ದಾಖಲೆಗಳನ್ನ ಅಳಸಿಹಾಕಲಿದೆಯೋ, ಅದೆಂಥಾ ಇತಿಹಾಸ ಸೃಷ್ಟಿಸಲಿದೆಯೋ ಏನೋ ಆ ಮತಸಂಗ್ರಾಮ. ಆ ಮಹಾಮತ ಸಂಗ್ರಾಮಕ್ಕೆ ಉಳಿದಿರೋದು ನೂರಕ್ಕಿಂತಾ ಕಡಿಮೆ ದಿನ. 2024ರ ಲೋಕಸಭಾ ಚುನಾವಣೆ(Loksabha) ಸಮೀಪಕ್ಕೆ ಬರ್ತಾ ಇದೆ. ಇನ್ನೆರಡೂವರೆ ತಿಂಗಳುಗಳ ಒಳಗೆ, ದೇಶದಲ್ಲಿ ಸಾರ್ವತ್ರಿಕ ಚುನಾವಣೆ(Election) ನಡೆದು ಹೋಗುತ್ತೆ. ನವೋಲ್ಲಸದ ಸರ್ಕಾರ ಒಂದು ದೆಹಲಿ ಗದ್ದುಗೆ ಮೇಲೆ ಕೂರುತ್ತೆ. ಹಾಗಾಗಿನೆ, ಒಂದೊಂದು ದಿನ ಕಳೆದ ಹಾಗೂ ರಾಜಕೀಯ ರಣರಂಗ ರಂಗು ರಂಗಾಗ್ತಾ ಇದೆ. ಪ್ರಜಾಪ್ರಭುತ್ವದ ಮಹಾ ಹಬ್ಬಕ್ಕೆ ಎಲ್ಲ ರಾಜಕೀಯ ಪಕ್ಷಗಳು ಸಿದ್ಧತೆಯಲ್ಲಿ ತೊಡಗಿದ್ದಾವೆ. ಚುನಾವಣಾ ಆಯೋಗ ಕೂಡ ಆದಷ್ಟು ಬೇಗ ಚುನಾವಣಾ ದಿನಾಂಕಗಳನ್ನ ಪ್ರಕಟಿಸೋ ಎಲ್ಲಾ ಲಕ್ಷಣಗಳೂ ದಟ್ಟವಾಗಿ ಕಾಣ್ತಾ ಇದಾವೆ. ಅದರ ಬೆನ್ನಲ್ಲೇ ಚುನಾವಣಾ ಫಲಿತಾಂಶದ ಬಗ್ಗೆ ರಾಜಕೀಯ ಊಹಾಪೋಹಗಳ ಪರ್ವವೂ ಆರಂಭವಾಗಿದೆ. ಈ ಊಹಾಪೋಹಗಳು ಯಾವ ದಿಕ್ಕಿನಿಂದ ಹೊರಹೊಮ್ಮುತ್ತಿವೆ, ನಯಾರ ಕಡೆ ಗೆಲುವಿನ ಗಾಳಿ ಬೀಸ್ತಾ ಇದೆ ಅನ್ನೋದರ ಚರ್ಚೆ, ದೇಶದ ನಾಲ್ದೆಸೆಯಲ್ಲೂ ನಡೀತಿದೆ. ಈಗಾಗ್ಲೇ, ಗೆಲ್ಲೋದು ಮೋದಿ ಪಡೆಯೋ, ಎದುರಾಳಿ ಸೇನೆಯೋ ಅನ್ನೋ ಪ್ರಶ್ನೆಗೆ ಉತ್ತರ ಹುಡುಕ್ತಾ, ಸಾಕಷ್ಟು ಸಮೀಕ್ಷೆಗಳು ನಡೆದಿದ್ದಾವೆ. ಅವುಗಳ ಎಂಡ್ ರಿಸಲ್ಟ್ ಏನು ಅನ್ನೋದನ್ನ ನಾವೂ ನಿಮಗೆ ಸಾಕಷ್ಟು ಬಾರಿ ಹೇಳಿದ್ದೀವಿ. ಆದ್ರೆ ಈಗ ಹೊಸದಾಗಿ ಮತ್ತೊಂದು ಸರ್ವೆ ರಿಪೋರ್ಟ್ ಬಂದಿದೆ. ಈ ಸಮೀಕ್ಷೆ ಸಾಕಷ್ಟು ಅಚ್ಚರಿಯ ಸಂಗತಿಗಳನ್ನ ಬಯಲಿಗೆ ತಂದಿದೆ. ಝೀ ನ್ಯೂಸ್(Zee News) ಮತ್ತು ಮ್ಯಾಟ್ರೈಸ್(Matrize) ಸಂಸ್ಥೆಗಳು ಚುನಾವಣಾ ಪೂರ್ವ ಅಭಿಪ್ರಾಯ ಸಂಗ್ರಹ ಮಾಡಿದ್ವು. ಸಾಕಷ್ಟು ಪ್ರಶ್ನೆಗಳನ್ನ ಜನರ ಮುಂದಿಟ್ಟು ಉತ್ತರ ಪಡೆಯೋ ಪ್ರಯತ್ನ ಮಾಡಿದ್ವು. ಈ ಸಮೀಕ್ಷೆಯಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಹ್ಯಾಟ್ರಿಕ್ ಸಾಧಿಸೋಕೆ ಸಿದ್ಧವಾಗಿದೆ ಅನ್ನೋದು ಗೊತ್ತಾಗುತ್ತೆ.ಆದ್ರೆ, ಈ ಸಮೀಕ್ಷೆ ಹಲವು ರಹಸ್ಯಗಳನ್ನೂ ಬಯಲು ಮಾಡಿದೆ.
ಇದನ್ನೂ ವೀಕ್ಷಿಸಿ: DK Shivakumar: ಅಮಾನತುಗೊಂಡ ಶಾಸಕರು ಈಗ ಎಲ್ಲಿದ್ದಾರೆ..? ಸಹೋದರ ಆಗ್ತಾರಾ..? ದಾಯಾದಿ ಆಗ್ತಾರಾ ವಿಕ್ರಮಾದಿತ್ಯ ಸಿಂಗ್..?