ನೀರಿನಲ್ಲಿ ನಡ್ಕೊಂಡು ಬರ್ತಿದ್ದ ಹಸುವಿಗೆ ಕರೆಂಟ್‌ ಶಾಕ್:‌ ಪ್ರಾಣ ಪಣಕ್ಕಿಟ್ಟು ರಕ್ಷಿಸಿದ ಯುವಕರು

ಹಸುವೊಂದು ವಿದ್ಯುತ್ ಶಾಕ್‌ಗೆ ಒಳಗಾಗಿದ್ದು, ಇಬ್ಬರು ಯುವಕರು ಪ್ರಾಣದ ಹಂಗು ತೊರೆದು ಹಸುವನ್ನು ರಕ್ಷಿಸಿ ಸಾಹಸ ಮೆರೆದಿದ್ದಾರೆ. ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

First Published Jul 4, 2022, 9:57 PM IST | Last Updated Jul 4, 2022, 9:57 PM IST

ಮಾನವ ತನ್ನ ಸೌಕರ್ಯಕ್ಕಾಗಿ ಮಾಡಿಕೊಂಡ ಹಲವು ಸವಲತ್ತುಗಳು ಪ್ರಾಣಿ ಪಕ್ಷಿಗಳ ಪಾಲಿಗೆ ಮಾರಕವಾಗುತ್ತಿವೆ. ಹಲವು ಪ್ರಾಣಿ ಪಕ್ಷಿಗಳು ವಿದ್ಯುತ್ ಆಘಾತಕ್ಕೊಳಗಾಗಿ ಸಾಯುವ ಅಥವಾ ವಿಲ ವಿಲ ಒದ್ದಾಡುವ ದೃಶ್ಯವನ್ನು ನಾವು ಈಗಾಗಲೇ ನೋಡಿದ್ದೇವೆ. ಅದೇ ರೀತಿ ಈಗ ಹಸುವೊಂದು ವಿದ್ಯುತ್ ಶಾಕ್‌ಗೆ ಒಳಗಾಗಿದ್ದು, ಇಬ್ಬರು ಯುವಕರು ಪ್ರಾಣದ ಹಂಗು ತೊರೆದು ಹಸುವನ್ನು ರಕ್ಷಿಸಿ ಸಾಹಸ ಮೆರೆದಿದ್ದಾರೆ. ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವಕರ ಕಾರ್ಯಕ್ಕೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ನೀರು ತುಂಬಿದ ರಸ್ತೆಯಲ್ಲಿ ಹಸು ನಡೆದುಕೊಂಡು ಬರುತ್ತಿದ್ದು, ಒಂದು ಕರೆಂಟು ಕಂಬದ ಸಮೀಪ ಬರುತ್ತಿದ್ದಂತೆ ಹಸು ಮುಂದೆ ಹೆಜ್ಜೆ ಇಡಲು ಸಾಧ್ಯವಾಗದೇ ಅಲ್ಲೇ ಬಿದ್ದು ಒದ್ದಾಡಿದೆ. ಇದನ್ನು ಗಮನಿಸಿದ ಯುವಕರು ಕೂಡಲೇ ಹಸುವಿನ ಕಾಲಿಗೆ ಹಗ್ಗ ಕಟ್ಟಿ ಬೇರೆಡೆ ಡಳೆದು ಹಾಕಿ ಹಸುವಿನ ಜೀವ ಉಳಿಸಿದ್ದಾರೆ.