ಮೋಜು ಮಸ್ತಿ ವೇಳೆ ಯುವತಿಯರನ್ನ ಎಳೆದೊಯ್ದ ದೈತ್ಯ ಅಲೆ: ವಿಡಿಯೋ ವೈರಲ್

ಸಮುದ್ರದ ಅಲೆಗೆ ತೀರದಲ್ಲಿ ಮೋಜು ಮಾಡುತ್ತಿದ್ದ ಮಹಿಳೆಯರು ದೈತ್ಯ ಅಲೆಗೆ ಕೊಚ್ಚಿ ಹೋಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

First Published Jul 14, 2022, 4:27 PM IST | Last Updated Jul 14, 2022, 4:27 PM IST

ಹೇಳಿ ಕೇಳಿ ಇದು ಮಳೆಗಾಲ ಸಮುದ್ರದ ಅಲೆಗಳು ಉಕ್ಕುಕ್ಕಿ ಮೇಲೇರಿ ಯಾವಾಗ ಸೆಳೆದೊಯ್ಯುವುದೋ ಹೇಳಲಾಗದು. ಸಮುದ್ರ ಶಾಂತವಾಗಿದ್ದಾಗ ಎಷ್ಟು ಸುಂದರವೋ ಭೋರ್ಗರೆದಾಗ ಅಷ್ಟೇ ಅಪಾಯಕಾರಿ. ಇಲ್ಲೊಂದು ಕಡೆ ಅಪಾಯವನ್ನು ಲೆಕ್ಕಿಸದೆ ಸಮುದ್ರದ ದಡದಲ್ಲಿ ನಿಂತು ಯುವತಿಯರು ಮೋಜು ಮಸ್ತಿ ಮಾಡ್ತಿದ್ರು. ಈ ವೇಳೆ ನೋಡ ನೋಡುತ್ತಲೇ ದೈತ್ಯ ಅಲೆಗಳು ಬಂದಪ್ಪಳಿಸಿದ್ದು. ಮಸ್ತಿ ಮಾಡ್ತಿದ್ದ ಯವತಿಯರು ಅಲೆಗಳೊಂದಿಗೆ ಕೊಚ್ಚಿ ಹೋಗಿದ್ದಾರೆ. ಈ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.