ಮಳೆಗೆ ಬಲಿಯಾದವರೆಷ್ಟು ಜನ: ಇಲ್ಲಿದೆ ವರುಣಾರ್ಭಟದ ವೈರಲ್‌ ವಿಡಿಯೋಗಳು

ದೇಶಾದ್ಯಂತ ಮಳೆಗೆ ಬಲಿಯಾದವರ ಸಂಖ್ಯೆ ನೂರರ ಗಡಿ ದಾಟಿದೆ. ಕ್ಯಾಮರಾದಲ್ಲಿ ಸೆರೆಯಾದ ಮಳೆಯ ಅವಾಂತರದ ಭಯಾನಕ ದೃಶ್ಯಗಳು ಇಲ್ಲಿವೆ. 

First Published Jul 17, 2022, 9:02 PM IST | Last Updated Jul 17, 2022, 9:02 PM IST

ಈ ಬಾರಿ ಮಳೆಯ ಅವಾಂತರಕ್ಕೆ ಇಡೀ ದೇಶವೇ ತತ್ತರಿಸಿದೆ. ಹಲವೆಡೆ ರಸ್ತೆಗಳು ಕೊಚ್ಚಿ ಹೋಗಿದ್ದು ಸಂಪೂರ್ಣ ಸಂಪರ್ಕ ಕಡಿತಗೊಂಡಿವೆ. ಹಲವು ಪ್ರದೇಶಗಳು ಸಂಪರ್ಕ ಕಳೆದುಕೊಂಡು ದ್ವೀಪದಂತಾಗಿವೆ. ಅದರ ನಡುವೆ ಕೆಲವೆಡೆ ವಾಹನ ಸವಾರರು ತುಂಬಿ ಹರಿಯುವ ರಸ್ತೆ ಸೇತುವೆಗಳನ್ನು ದಾಟಲು ಹೋಗಿ ಹಲವರ ಪ್ರಾಣಕ್ಕೆ ಎರವಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರವಾಹಕ್ಕೆ ಕೊಚ್ಚಿಹೋದ ತಂದೆ ಮಗ ಕೊಚ್ಚಿ ಹೋಗಿದ್ದರೆ, ಆಂಧ್ರಪ್ರದೇಶದಲ್ಲಿ ಒಬ್ಬರು ಬಾಹುಬಲಿ ರೀತಿಯಲ್ಲಿ ಬುಟ್ಟಿಯಲ್ಲಿ ಮಗುವನ್ನು ಹೊತ್ತುಕೊಂಡು ನೀರು ತುಂಬಿದ ಪ್ರದೇಶದಿಂದ ಮಗುವನ್ನು ಬಚಾವ್‌ ಮಾಡಿ ಬೇರೆಡೆ ಸಾಗಿಸಿದ್ದಾರೆ. ಹಲವೆಡೆ ಜಲ ಪ್ರವಾಹದ ಜೊತೆ ಭೂ ಕುಸಿತ ಕೂಡ ಸಂಭವಿಸಿದ್ದು ಹಲವು ಮನೆಗಳು ನೆಲಸಮವಾಗಿವೆ. ದೇಶಾದ್ಯಂತ ಮಳೆಗೆ ಬಲಿಯಾದವರ ಸಂಖ್ಯೆ ನೂರರ ಗಡಿ ದಾಟಿದೆ. ಕ್ಯಾಮರಾದಲ್ಲಿ ಸೆರೆಯಾದ ಮಳೆಯ ಅವಾಂತರದ ಭಯಾನಕ ದೃಶ್ಯಗಳು ಇಲ್ಲಿವೆ.