Asianet Suvarna News Asianet Suvarna News

CAA ವಿರೋಧಿ ಹೋರಾಟಕ್ಕೆ ಕ್ವಿಂಟಾಲ್‌ಗಟ್ಟಲೇ ಅಕ್ಕಿ ದೇಣಿಗೆ!

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ; ಧರಣಿ ಮುಂದುವರಿಸಲು ಗ್ರಾಮಸ್ಥರಿಂದ ಭಾರೀ ಪ್ರಮಾಣದಲ್ಲಿ ಅಕ್ಕಿ ದೇಣಿಗೆ; ಕೇಂದ್ರದ ಹೊಸ ಕಾನೂನಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 60ಕ್ಕಿಂತಲೂ ಹೆಚ್ಚು ಆರ್ಜಿ

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ  ಆಲ್ ಅಸ್ಸಾಮ್ ಸ್ಟುಡೆಂಟ್ಸ್ ಯೂನಿಯನ್ ಕಾರ್ಯಕರ್ತರಿಗೆ, ಧರಣಿ ಮುಂದುವರಿಸಲು ದಿಬ್ರೂಗಢ ಜಿಲ್ಲೆಯ ಜನ ಭಾರೀ ಪ್ರಮಾಣದಲ್ಲಿ ಅಕ್ಕಿಯನ್ನು ದೇಣಿಗೆಯ ರೂಪದಲ್ಲಿ ನೀಡುತ್ತಿದ್ದಾರೆ.

ದಿಬ್ರೂಗಢ ಜಿಲ್ಲೆಯ 85 ಗ್ರಾಮದ ಜನರು ಸುಮಾರು 350 ಕ್ವಿಂಟಾಲ್ ಅಕ್ಕಿಯನ್ನು  ಸಂಘಟನೆಯ ಪ್ರಧಾನ ಕಾರ್ಯದರ್ಶಿ ಲ್ಯುರಿನ್‌ಜ್ಯೋತಿಗೆ ಹಸ್ತಾಂತರಿಸಿದರು. ದಿಬ್ರೂಗಢ ಜಿಲ್ಲೆ ಅತೀ ಹೆಚ್ಚು ಅಕ್ಕಿ ಉತ್ಪಾದಿಸುವ ಪ್ರದೇಶವಾಗಿದ್ದು, 50 ಕೇಜಿ ತೂಗುವ ಸುಮಾರು 645 ಅಕ್ಕಿ ಚೀಲಗಳನ್ನು ಪ್ರತಿಭಟನಾಕಾರರಿಗೆ ನೀಡಲಾಗಿದೆ.

ಇದನ್ನೂ ಓದಿ | ಮೋದಿ ಸರ್ಕಾರ ಹಿಂದೂ ವಿರೋಧಿ: ಅಂಬೇಡ್ಕರ್ ಮೊಮ್ಮಗ!...

ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ಅಲ್ಪಸಂಖ್ಯಾತರಿಗೆ  ಪೌರತ್ವ ನೀಡುವ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ, ಆಸು ಸಂಘಟನೆಯು ಪ್ರತಿಭಟನೆಯ ನೇತೃತ್ವವನ್ನು ವಹಿಸಿದೆ. ಕೇಂದ್ರದ ಹೊಸ ಕಾನೂನಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 60ಕ್ಕಿಂತಲೂ ಹೆಚ್ಚು ಆರ್ಜಿಗಳನ್ನು ಸಲ್ಲಿಸಲಾಗಿದೆ.  ದೇಶಾದ್ಯಂತ ಈ ಕಾಯ್ದೆ ವಿರುದ್ಧ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ.

Video Top Stories