Asianet Suvarna News Asianet Suvarna News

ಸೂಪರ್ ಸ್ಪೆಷಲ್ ಸ್ಟೋರಿ... ಆರು ಸಿಂಹಗಳೊಂದಿಗೆ ಹೆಜ್ಜೆ ಹಾಕಿದ ಕೃಷ್ಣ ಸುಂದರಿ

6 ಸಿಂಹಿಣಿಗಳೊಂದಿಗೆ ಯುವತಿಯೊಬ್ಬಳು ಹೆಜ್ಜೆ ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

6 ಸಿಂಹಿಣಿಗಳೊಂದಿಗೆ ಯುವತಿಯೊಬ್ಬಳು ಹೆಜ್ಜೆ ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಿಂಹಗಳೊಂದಿಗೆ ಮಾಡೆಲ್‌ ರೀತಿ ಹೆಜ್ಜೆ ಹಾಕುತ್ತಿರುವ ಈ ಕೃಷ್ಣ ಸುಂದರಿ ವಿಡಿಯೋ ನೋಡುಗರ ಮೈ ಜುಮ್ಮೆನಿಸುವಂತಿದೆ.  

ರಸ್ತೆಯಲ್ಲಿ ತಳ್ಳುಗಾಡಿಯೊಂದು ತನ್ನ ಕಾರಿಗೆ ಡಿಕ್ಕಿಯಾಯ್ತು ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಮಹಿಳೆಯೊಬ್ಬಳು ತಳ್ಳುಗಾಡಿಯಲ್ಲಿದ್ದ ಹಣ್ಣುಗಳನ್ನು ಒಂದೊಂದೇ ಎತ್ತಿ ಕೆಳಕ್ಕೆಸೆದಿದ್ದಾಳೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಈ ಘಟನೆ ನಡೆದಿದೆ. ಮಹಿಳೆ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.  ಆನೆ ಮರಿಯೊಂದಿಗೆ ಯುವಕನೋರ್ವ ಆಟವಾಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.  

ಕೇರಳದಲ್ಲಿ ಹೆಬ್ಬಾವೊಂದು ರಸ್ತೆ ದಾಟುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಸ್ತೆ ದಾಟಲು ಐದು ನಿಮಿಷ ತೆಗೆದುಕೊಂಡ ಈ ಹೆಬ್ಬಾವಿನಿಂದ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್ ಉಂಟಾಗಿತ್ತು. ಸುಮ್ಮನಿದ್ದ ಗೂಳಿಯೊಂದನ್ನು ಕೆಣಕಲು ಹೋದ ವೃದ್ಧರೊಬ್ಬರು ಆದರಿಂದ ಸರಿಯಾಗಿ ಗುಮ್ಮಿಸಿಕೊಂಡಿದ್ದಾರೆ. ಕೈಯಲ್ಲಿ ಕೋಲಿಡಿದು ನಡೆದುಕೊಂಡು ಹೋಗುತ್ತಿದ್ದ ಅಜ್ಜ ರಸ್ತೆಬದಿ ಸುಮ್ಮನೆ ನಿಂತಿದ್ದ ಗೂಳಿಗೆ ಬಾರಿಸಿದ್ದಾರೆ. ಸಿಟ್ಟಿಗೆದ್ದ ಗೂಳಿ ಅಜ್ಜನನ್ನು ಮೇಲೆತ್ತಿ ಕೆಳಕ್ಕೆಸೆದಿದೆ.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ... ಬಡ ವ್ಯಾಪಾರಿಯ ಮೇಲೆ ಮಹಿಳೆಯ ದೌರ್ಜನ್ಯ... ವಿಡಿಯೋ ವೈರಲ್‌