Asianet Suvarna News Asianet Suvarna News

ಕಾರಿನ ಗ್ಲಾಸ್ ಕ್ಲೀನ್ ಮಾಡಿದ ಪ್ರಿಯಾಂಕಾ ಗಾಂಧಿ, ವಿಡಿಯೋ ವೈರಲ್!

ರಸ್ತೆ ಬದಿ ಕಾರು ನಿಲ್ಲಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ ಕಾರಿನ ಗ್ಲಾಸಿನ ವಿಡಿಯೋ ಶುಚಿಗೊಳಿಸಿದ ವಿಡಿಯೋ ಭಾರೀ ವೈರಲ್ ಆಗಿದೆ.

ಲಕ್ನೋ(ಫೆ.04):  ರಸ್ತೆ ಬದಿ ಕಾರು ನಿಲ್ಲಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ ಕಾರಿನ ಗ್ಲಾಸಿನ ವಿಡಿಯೋ ಶುಚಿಗೊಳಿಸಿದ ವಿಡಿಯೋ ಭಾರೀ ವೈರಲ್ ಆಗಿದೆ.

ಟ್ರಾಕ್ಟರ್ ಪರೇಡ್ ವೇಳೆ ಮೃತಪಟ್ಟ ರೈತನ ಕುಟುಂಬ ಸದಸ್ಯರನ್ನು ಭೇಟಿಯಾಗಲು ಪ್ರಿಯಾಂಕಾ ಗಾಂಧಿ ದೆಹಲಿಯಿಂದ ರಾಮ್‌ಪುರಕ್ಕೆ ಪ್ರಯಾಣ ಬೆಳೆಸಿದ್ದರು. ಆದರೆ ಮಂಜಿನ ವಾತಾವರಣದಿಂದ ಈ ಪ್ರಯಾಣ ಕಷ್ಟವಾಗುತ್ತಿತ್ತು. 

ಹೀಗಿರುವಾಗ ಪ್ರಿಯಾಂಕಾ ಗಾಂಧಿ ಕಾರಿನಿಂದ ಇಳಿದು ಗ್ಲಾಸ್ ಕ್ಲೀನ್ ಮಾಡಿದ್ದಾರೆ.