Asianet Suvarna News Asianet Suvarna News

ತಾಯಿ ಉಳಿಸಲು ಮಗನ ಪರದಾಟ: 'ಕಂದ'ನ ತೋಳಿನಲ್ಲೇ ಪ್ರಾಣ ಬಿಟ್ಟ ಅವ್ವ!

ಮಗನ ತೊಳಿನಲ್ಲೇ ತಾಯಿಯೊಬ್ಬಳು ಪ್ರಾಣ ಬಿಟ್ಟ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಾಯಿ ಉಳಿಸಿಕೊಳ್ಳಲು ಮಗ ಪರದಾಡಿದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಲಕ್ನೋ(ಏ.29): ಮಗನ ತೊಳಿನಲ್ಲೇ ತಾಯಿಯೊಬ್ಬಳು ಪ್ರಾಣ ಬಿಟ್ಟ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಾಯಿ ಉಳಿಸಿಕೊಳ್ಳಲು ಮಗ ಪರದಾಡಿದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ಘಟನೆಯ ದೃಶ್ಯಾವಳಿಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಇದು ನೆಟ್ಟಿಗಗರನ್ನು ಭಾವುಕರನ್ನಾಗಿಸಿದೆ.

ಬೈಕಲ್ಲಿ 430 ಕಿ.ಮೀ. ಹೋಗಿ ಕ್ಯಾನ್ಸರ್‌ ಔಷಧ ಕೊಟ್ಟು ಮಾನವೀಯತೆ ಮೆರೆದ ಪೊಲೀಸ್‌..!

ಕೊರೋನಾ ಭೀತಿ ಹಿನ್ನೆಲೆ ವೈದ್ಯರು ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಾಗಿ ಮಗ ತನ್ನ ತಾಯಿಯನ್ನು ಕಳೆದುಕೊಂಡಿದ್ದಾನೆ.