Asianet Suvarna News Asianet Suvarna News

ಸ್ವತಂತ್ರ ಭಾರತ ಕಂಡ ಭಯಾನಕ ಹಂತಕಿ; ಮೊದಲ ಬಾರಿ ಮಹಿಳೆಗೆ ಗಲ್ಲು ಶಿಕ್ಷೆ?

 ಪ್ರಿಯಕರನ ಜೊತೆಗೂಡಿ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ದೋಷಿ ಆಗಿರುವ  ಶಬನಂ ಎಂಬಾಕೆಯನ್ನು ಗಲ್ಲಿಗೆ ಏರಿಸಲು ಉತ್ತರ ಪ್ರದೇಶದ ಮಥುರಾ ಜಿಲ್ಲಾ ಜೈಲಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 

 ಲಕ್ನೋ (ಫೆ. 20):  ಪ್ರಿಯಕರನ ಜೊತೆಗೂಡಿ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ದೋಷಿ ಆಗಿರುವ  ಶಬನಂ ಎಂಬಾಕೆಯನ್ನು ಗಲ್ಲಿಗೆ ಏರಿಸಲು ಉತ್ತರ ಪ್ರದೇಶದ ಮಥುರಾ ಜಿಲ್ಲಾ ಜೈಲಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಒಂದು ವೇಳೆ ಆಕೆಯನ್ನು ಗಲ್ಲಿಗೆ ಏರಿಸಿದರೆ ಸ್ವತಂತ್ರ ಭಾರತದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಮೊದಲ ಮಹಿಳೆ ಎನಿಸಿಕೊಳ್ಳಲಿದ್ದಾಳೆ.  ನಿರ್ಭಯಾ ರೇಪಿಸ್ಟ್‌ಗಳನ್ನು ಗಲ್ಲಿಗೇರಿಸಿದ ನೇಣುಗಾರ ಪವನ್‌ ಜಲ್ಲಾದ್‌ ಕೂಡ ಬಂದು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನ್ಯೂಸ್ ಅವರ್ ; ತರಕಾರಿ ದರ ಏರಿಕೆ ಹಿಂದಿನ ಸತ್ಯ, ಟೊಯೋಟಾ ಪ್ರೊಟೆಸ್ಟ್ ಮುಗಿಯದ ಕತೆ

ಈಕೆ 2008 ರಲ್ಲಿ ತನ್ನ ಪೋಷಕರು, ಇಬ್ಬರು ಸಹೋದರರು ಮತ್ತು ನಾದಿನಿ, ಸೋದರ ಸಂಬಂಧಿ ಹಾಗೂ 10 ತಿಂಗಳ ಮುಗುವಿಗೆ ಮತ್ತು ಬರುವ ಪೇಯವನ್ನು ನೀಡಿ ಬಳಿಕ ಪ್ರಿಯಕರನ ಜೊತೆಗೂಡಿ ಹತ್ಯೆ ಮಾಡಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯ ಇಬ್ಬರಿಗೂ ಗಲ್ಲು ಶಿಕ್ಷೆ ನೀಡಿತ್ತು.