Asianet Suvarna News Asianet Suvarna News

ಎರಡು ತಲೆ, 3 ಕಣ್ಣು: ನವರಾತ್ರಿ ದಿನ ಜನಿಸಿದ ಅಪರೂಪದ ಕರು

Oct 14, 2021, 11:36 AM IST

ನವರಾತ್ರಿ ದಿನದಂದೇ ಎರಡು ತಲೆ ಮೂರು ಕಣ್ಣುಗಳುಳ್ಳ ಕರುವಿನ(Calf) ಜನನವಾಗಿದೆ. ಇದನ್ನು ನೋಡಿದ ಜನರು ಇದು ದುರ್ಗಾಮಾತೆಯ ಅವತಾರ ಎಂದು ಪೂಜೆ ಮಾಡಲು ಮುಂದಾಗಿದ್ದಾರೆ. ಇದೇನು ವಿಚಿತ್ರಾ ಎಂದು ಅಚ್ಚರಿಪಟ್ಟಿದ್ದಾರೆ ಜನರು.

ಕೂದಲಿಂದಲೇ ವಾಹನ ಎಳೆದ ಮಹಿಳೆ: ನಿಮ್‌ದ್ಯಾವ ಶಾಂಪೂ ಎಂದ ನೆಟ್ಟಿಗರು

ಒರಿಸ್ಸಾದ ರೈತನ ಕೊಟ್ಟಿಗೆಯಲ್ಲಿ ಈ ಅಪರೂಪದ ಕರು ಹುಟ್ಟಿದ್ದು ಮಾಲೀಕ ಕೂಡಾ ಅಚ್ಚರಿಪಟ್ಟಿದ್ದಾರೆ. ಮುದ್ದಾದ ಕರುವಿಗೆ ಎರಡು ತಲೆ ಇದ್ದು ಮೂರು ಕಣ್ಣೂ ಇರುವುದು ಈ ವಿಷಯ ಊರಿಗೇ ತಿಳಿದಿದೆ. ಬಹಳಷ್ಟು ದೂರದಿಂದಲೂ ಜನರು ಬಂದು ಈ ಕರುವನ್ನು ನೋಡಿ ಹೋಗುತ್ತಿದ್ದಾರೆ.